ಡಿಸಿ ಕಛೇರಿ ಮುಂದೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಪ್ರತಿಭಟನೆತುಮಕೂರು
ತುಮಕೂರು:
ತುಮಕೂರು ಜಿಲ್ಲೆಯ ತಾಲೂಕು ವ್ಯಾಪ್ತಿಗೆ ಒಳಪಡುವ ಭೂಮಿ, ವಸತಿ ಸಮಸ್ಯೆಗಳನ್ನು ವಿಳಂಬ ಮಾಡದೆ ತುರ್ತಾಗಿ ಬಗೆಹರಿಸಿಕೊಡುವ ಕುರಿತು ಪ್ರತಿಭಟನೆ ನಡೆಸಲಾಯಿತು. ನಗರದ ಟೌನ್ ಹಾಲ್ ನಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿ ಡಿಸಿ ಕಚೇರಿ ಮುಂಭಾಗದಲ್ಲಿ ತಾಲೂಕು ಆಡಳಿತಕ್ಕೆ ಹಾಗೂ ಸರ್ಕಾರಕ್ಕೆ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಮಾತನಾಡಿದ ಹಂದ್ರಾಳ್ ನಾಗಭೂಷಣ್ ಸರ್ಕಾರದ ಗಮನಕ್ಕೆ ನಾವೀಗಾಗಲೇ ಹಲವು ಬಾರಿ ನಮ್ಮ ಮನವಿ ನೀಡಿದ್ದೇವೆ ಆದರೂ ಕೂಡ ಜಿಲ್ಲಾಧಿಕಾರಿಗಳಾಗಲಿ, ತಹಶೀಲ್ದಾರ್ ಆಗಲಿ, ಇಲ್ಲಿನ ಸಚಿವರು, ಶಾಸಕರುಗಳಾಗಲಿ ನಮ್ಮ ಮನವಿಗೆ ಸ್ಪಂದಿಸಿಲ್ಲ. ಆದ್ದರಿಂದ, ಮುಂಬರುವ ಮಾರ್ಚ್ 15 ರ ಒಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಆಹೋ ರಾತ್ರಿ ಧರಣಿ ಮಾಡುತ್ತೇವೆ ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಮಹಿಳೆಯೊಬ್ಬರು ಮಾತನಾಡಿ ಸರ್ಕಾರ ಸರಿಯಾಗಿ ಸ್ಪಂದಿಸುತ್ತಾ ಇಲ್ಲ 45 ವರ್ಷಗಳಿಂದ ನಮಗೆ ಭೂಮಿಯಾಗಲಿ, ವಸತಿಯಾಗಲಿ ನೀಡಿಲ್ಲ ಇನ್ನು ಮುಂದೆ ಸಹ ಇದೇ ರೀತಿ ಬೇಜವಾಬ್ದಾರಿತನ ಮುಂದುವರಿಸಿದರೆ ಸರಿ ಇರುವುದಿಲ್ಲ ಮುಂದಿನ ದಿನಗಳಲ್ಲಿ ನಾವು ತಿಂಗಳಾನುಗಟ್ಟಲೆ ಧರಣಿ ಕೂರುತ್ತೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮತ್ತೋರ್ವ ರೈತ ಮಾತನಾಡಿ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ನಾನು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.