ತುಮಕೂರು :
ತುಮಕೂರು ಗ್ರಾಮಾಂತರ ಕ್ಷೇತ್ರದ ಹೊನ್ನುಡಿಕೆ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ನಿತ್ಯ ನೂರಾರು ಮಂದಿ ಜನರು ಬರ್ತಾರೆ. ಹೋಗ್ತಾರೆ. ಅಷ್ಟೇ ಅಲ್ಲ ಹತ್ತಾರು ಮಂದಿ ಅಧಿಕಾರಿಗಳು ಕೂಡ ಕೆಲಸ ಮಾಡ್ತಾರೆ. ಆದರೆ ಈ ಕಚೇರಿಯ ಆವರಣವನ್ನು ಕುಡುಕರು ಅಡ್ಡೆಯಾಗಿ ಮಾಡಿಕೊಂಡಿದ್ದಾರೆ. ರಾತ್ರಿ ವೇಳೆ ಮತ್ತೆ ರಜೆ ದಿನದ ವೇಳೆ ಕುಡುಕರು ಇಲ್ಲಿ ಕುಡಿದು ಇಲ್ಲಿಯೇ ಮದ್ಯದ ಬಾಟಲ್ಗಳನ್ನು ಬಿಸಾಡಿ ಹೋಗಿದ್ದಾರೆ. ಅಲ್ಲದೇ ಕಸ- ಕಡ್ಡಿ, ಗಿಡಗಂಟಿಗಳು ಬೆಳೆದು ನಿಂತಿದ್ದು, ಇದರಿಂದ ಕೆಲಸ ಮಾಡುವವರಿಗೂ ಹಾಗೂ ಜನರಿಗೂ ಸಾಕಷ್ಟು ತೊಂದರೆ ಆಗ್ತಿದೆ ಎಂದು ಇಲ್ಲಿನ ಸಾರ್ವಜನಿಕರು ದೂರುತ್ತಿದ್ದಾರೆ.
ಕಸದ ರಾಶಿ, ಮದ್ಯದ ಬಾಟಲ್ಗಳು ಬಿದ್ದಿದ್ದು, ಗ್ರಾಮಲೆಕ್ಕಾಧಿಕಾರಿ ಕಚೇರಿ ಆವರಣ ಗಬ್ಬೇದ್ದು ನಾರುತ್ತಿದೆ. ಇಲ್ಲಿನ ಕಚೇರಿ ನೌಕರರು ಮೂಗು ಮುಚ್ಚಿಕೊಂಡು, ಕಿಟಕಿ ಬಾಗಿಲುಗಳನ್ನು ಹಾಕಿಕೊಂಡೆ ಕೆಲಸ ಮಾಡುವ ದುಸ್ಥಿತಿ ಇದೆ. ಇನ್ನು ಅಸ್ವಚ್ಛತೆ ಬಗ್ಗೆ ಪ್ರಜಾಶಕ್ತಿ ವರದಿಗಾರರು ಗ್ರಾಮ ಲೆಕ್ಕಾಧಿಕಾರಿ ರಂಗನಾಥ್ ಅವರನ್ನು ಕೇಳಿದ್ದಕ್ಕೆ, ಸ್ವಚ್ಛತೆ ಮಾಡುವುದು ನಮ್ಮ ಕೆಲಸವಲ್ಲ. ಅದೇನಿದ್ದರೂ ಪಂಚಾಯ್ತಿ ಅಧಿಕಾರಿಗಳ ಕೆಲಸ ಎಂದು ಉಡಾಫೆ ಉತ್ತರ ನೀಡ್ತಾ ಇದ್ದಾರೆ. ಅಲ್ಲದೇ ನಾವು ಪಂಚಾಯ್ತಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನ ಆಗ್ತಿಲ್ಲ ಅಂತಾ ಗ್ರಾಮ ಲೆಕ್ಕಾಧಿಕಾರಿ ಆಕ್ರೋಶ ಹೊರ ಹಾಕಿದರು.
ಅದೇನೆ ಆಗಲಿ ಜನರ ಕೆಲಸ ಮಾಡಿಕೊಡುವ ಕಚೇರಿಯೇ ಹೀಗೆ ಇಟ್ಟುಕೊಂಡರೆ. ಇನ್ನು ಜನರ ಕೆಲಸವನ್ನು ಹೇಗೆ ಮಾಡಬಹುದು ಅನ್ನೋದು ಪ್ರಶ್ನೆಯಾಗಿದೆ. ಸರ್ಕಾರದಿಂದ ಅನುದಾನ ಬಂದರೂ ಸ್ವಲ್ಪವೂ ಸ್ವಚ್ಛವಾಗಿಲ್ಲ, ಜೊತೆಗೆ ಕುಡುಕರ ಅಡ್ಡೆಯಾಗಿರೋದು ಅಧಿಕಾರಿಗಳ ಬೇಜವಾಬ್ದಾರಿ ಎಷ್ಟಿದೆ ಅನ್ನೋದಕ್ಕೆ ಸ್ಪಷ್ಟ ಸಾಕ್ಷ್ಯವಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.