BANGALORE: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಓಲಾ, ಊಬರ್ ಹಾಗೂ ರಾಪಿಡೋ ಕಂಪನಿಗಳ ಬೈಕ್ ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸಲು ಕರ್ನಾಟಕ ಹೈಕೋರ್ಟ್ ಈಗಾಗಲೇ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಗೆ ಇಂದು ಹೈಕೋರ್ಟ್ ಮಧ್ಯಂತರ ಅನುಮತಿ ನೀಡಲು ನಿರಾಕರಿಸಿದೆ.
ಇನ್ನು ಮೇಲ್ಮನವಿ ಅರ್ಜಿ ಮೇಲೆ ತೀರ್ಪು ಕೊಡಲು ಹೈಕೋರ್ಟ್ ಜೂನ್ 24ಕ್ಕೆ ಮುಂದೂಡಿದ್ದು, ಅಂತಿಮ ತೀರ್ಮಾನ ಅಂದು ನಿರ್ಧರಿಸಲಾಗುತ್ತದೆ. ಅಲ್ಲದೇ ಮಧ್ಯಂತರವಾಗಿ ಬೈಕ್ ಟ್ಯಾಕ್ಸಿಗಳಿಗೆ ಯಾವುದೇ ಅನುಮತಿ ಇರುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಓಲಾ, ಊಬರ್, ರಾಪಿಡೋ ಸೇರಿದಂತೆ ಹಲವಾರು ಆ್ಯಪ್ ಆಧಾರಿತ ಬೈಸಿಕಲ್/ಬೈಕ್ ಟ್ಯಾಕ್ಸಿಗಳು ತಾತ್ಕಾಲಿಕವಾಗಿ ಸಾರಿಗೆ ಸೇವೆ ನಿರ್ವಹಿಸಲು ಅಸಾಧ್ಯ. ದಿನನಿತ್ಯ ಈ ಸೇವೆ ಅವಲಂಬಿಸಿರುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಬಡ ರೈಡರ್‌ಗಳ ಜೀವನೋಪಾಯಕ್ಕೂ ಹಿನ್ನಡೆಯಾಗುವ ಸಾಧ್ಯತೆಯಿದ್ದು, ಸರ್ಕಾರ ಈ ಬಗೆಯ ಸೇವೆಗಳ ಲೈಸೆನ್ಸಿಂಗ್ ಮತ್ತು ನಿಯಮಗಳ ಕುರಿತಂತೆ ಸೂಕ್ತ ನೀತಿಗಳನ್ನು ರೂಪಿಸಲು ತಯಾರಿ ನಡೆಸುತ್ತಿದೆ. ಆದರೆ ನ್ಯಾಯಾಲಯದ ಅಂತಿಮ ತೀರ್ಪಿನ ನಂತರ ಮುಂದಿನ ನಡೆ ನಿರ್ಧರಿಸಲಾಗುವುದು