ತುಮಕೂರು : KSRTC ಬಸ್ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವು..!

ತುಮಕೂರು :

ಬೆಳ್ಳಂಬೆಳಗ್ಗೆ ಕೆಎಸ್.ಆರ್.ಟಿ.ಸಿ ಬಸ್‌ ಡಿಕ್ಕಿಯಾಗಿ ಮಹಿಳೆಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ತುಮಕೂರಿನ ಟೌನ್‌ ಹಾಲ್‌ ಸರ್ಕಲ್‌ ನಲ್ಲಿ ನಡೆದಿದೆ.

ಮಂಜಮ್ಮ (45) ಎಂಬುವರು ಮೃತ ದುರ್ದೈವಿಯಾಗಿದ್ದಾರೆ. ತುಮಕೂರು ಸರ್ಕಾರಿ ಬಸ್‌ ನಿಲ್ದಾಣದಿಂದ ಕಡೂರಿಗೆ ತೆರಳುತ್ತಿದ್ದ ಕಡೂರು ಡಿಪೋಗೆ ಸೇರಿದ ಕೆ.ಎಸ್.‌ ಆರ್.ಟಿ.ಸಿ ಬಸ್‌ ತುಮಕೂರಿನ ಟೌನ್‌ ಹಾಲ್‌ ಸರ್ಕಲ್‌ ಬಳಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಬಸ್‌ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಈ ಘಟನೆ ತುಮಕೂರು ಸಂಚಾರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ  ನಡೆದಿದ್ದು. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Author:

share
No Reviews