ಶಿರಾ : ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಂತರ ದೇಶದ ಸೈನಿಕರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ದೇಶಾದ್ಯಂತ ತಿರಂಗಯಾತ್ರೆ ಮಾಡಲಾಗ್ತಿದೆ. ಅದರಂತೆ ಶಿರಾದಲ್ಲಿಯೂ ಕೂಡ ಬಿಜೆಪಿಯ ವತಿಯಿಂದ ಬೃಹತ್ ತಿರಂಗಾ ಯಾತ್ರೆಯನ್ನು ನಡೆಸಲಾಯಿತು. ಈ ತಿರಂಗಾ ಯಾತ್ರೆಯಲ್ಲಿ ಬೃಹತ್ ರಾಷ್ಟ್ರಧ್ವಜ ನೋಡುಗರ ಕಣ್ಮನ ಸೆಳೆಯಿತು.
ಶಿರಾದ ಮುಖ್ಯರಸ್ತೆಯಲ್ಲಿ ಬಿಜೆಪಿಯ ಕಾರ್ಯಕರ್ತರು, ಮುಖಂಡರು, ವಿದ್ಯಾರ್ಥಿಗಳು, ಸಾರ್ವಜನಿಕರು ಈ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಬಿಜೆಪಿಯ ಮಧುಗಿರಿ ಜಿಲ್ಲಾ ಸಂಘಟನೆಯ ಮಾಜಿ ಅಧ್ಯಕ್ಷ ಬಿ.ಕೆ. ಮಂಜುನಾಥ್ ಮಾತನಾಡಿ, ಕಾಶ್ಮೀರದಲ್ಲಿ ಅಮಾಯಕ ಪ್ರವಾಸಿಗರನ್ನು ಕೊಂದ ಉಗ್ರರಿಗೆ ದೇಶದ ಸೈನಿಕರು ತಕ್ಕ ಉತ್ತರ ಕೊಟ್ಟಿದ್ದಾರೆ. ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದ ಹುಟ್ಟಡಗಿಸಿದ್ದಾರೆ. ದೇಶದ ಸೈನಿಕರ ಶೌರ್ಯದ ಪ್ರತೀಕವಾಗಿ ಈ ತಿರಂಗಾ ಯಾತ್ರೆಯನ್ನು ಮಾಡಲಾಗುತ್ತಿದೆ ಎಂದರು.
ಇನ್ನು ತಿರಂಗಾ ಯಾತ್ರೆಯು ಶಿರಾದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು. ಬೃಹತ್ ರಾಷ್ಟ ಧ್ವಜವನ್ನು ಹಿಡಿದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮೆರವಣಿಗೆಯಲ್ಲಿ ಸಾಗಿದರು, ತಿರಂಗಾ ಯಾತ್ರೆಯನ್ನು ಕಂಡ ಜನರು ಹರ್ಷೋದ್ಘಾರವನ್ನು ಕೂಗಿದರು.