ತುಮಕೂರು : ತುಮಕೂರು ನಗರದ ಹೃದಯ ಭಾಗವಾದ ಟೌನ್ ಹಾಲ್ ವೃತ್ತದ ಬಳಿ ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗಳ ಲೈನಿಗೆ ಮರದ ಕೊಂಬೆಗಳು ತಾಗುತ್ತಿವೆ. ಈ ಕುರಿತು ಸಾರ್ವಜನಿಕರು ಹಲವಾರು ಬಾರಿ ಕೆಇಬಿ ಅಧಿಕಾರಿಗಳ ಗಮನಕ್ಕೆ ತಂದರು ಕ್ಯಾರೆ ಎನ್ನುತ್ತಿಲ್ಲವಂತೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಫುಟ್ ಪಾತ್ ಮೇಲೆ ಪಾದಚಾರಿಗಳು ಜೀವ ಭಯದಿಂದಲೇ ಓಡಾಡುವಂತಾಗಿದೆ.
ಇನ್ನು ಕೆಇಬಿ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರು ಈಗಾಗಲೇ ಮಳೆಗಾಲ ಆರಂಭವಾಗಿದೆ. ಮರದ ಕೊಂಬೆಗಳು ಟ್ರಾನ್ಸ್ ಫಾರ್ಮರ್‌ಗಳ ಮೇಲೆ ಬೀಳುತ್ತಿವೆ. ಗಾಳಿ ಮಳೆಯಿಂದ ತೊಂದರೆ ಆಗುವ ಸಾದ್ಯತೆ ಇದೆ. ಈ ಕುರಿತಾಗಿ ನಾವು ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಅವರು ತಲೆ ಕೆಡಿಸಿಕೊಳ್ಳುತ್ತಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತ ಕುಣಿಗಲ್ ಸರ್ಕಲ್ ನಿಂದ ಹಿಡಿದು ಟೌನ್ ಹಾಲ್ ವೃತ್ತದವರೆಗೆ ಈ ಸಮಸ್ಯೆ ಗಂಭೀರವಾಗಿದ್ದು, ಕೆಲವೊಂದು ಕಡೆ ಟ್ರಾನ್ಸ್ ಫಾರ್ಮರ್‌ಗಳ ಹತ್ತಿರ ಜನರು ನಿಲ್ಲುವುದೇ ಅಪಾಯಕಾರಿಯಾಗಿದೆ. ಇನ್ನಾದರೂ ಕೆಇಬಿ ಅಧಿಕಾರಿಗಳು ಇತ್ತ ಗಮನಹರಿಸಿ ಮುಂದೆ ಆಗುವ ಅನಾಹುತವನ್ನು ತಪ್ಪಿಸಬೇಕಿದೆ.