ತುಮಕೂರು : ದಾದಾ ಸಾಹೇಬ್‌ ಕಾಂಶಿರಾಂ 91ನೇ ಜನ್ಮ ದಿನಾಚರಣೆ

ದಾದಾ ಸಾಹೇಬ್‌ ಕಾಂಶಿರಾಮ್‌ ಅವರ 91 ನೇ ಜನ್ಮ ದಿನಾಚರಣೆ
ದಾದಾ ಸಾಹೇಬ್‌ ಕಾಂಶಿರಾಮ್‌ ಅವರ 91 ನೇ ಜನ್ಮ ದಿನಾಚರಣೆ
ತುಮಕೂರು

ತುಮಕೂರು:

ತುಮಕೂರು ನಗರದ ಸರಸ್ವತಿಪುರಂನ ಬಿಎಸ್ಪಿ ಕಚೇರಿಯಲ್ಲಿ ದಾದಾ ಸಾಹೇಬ್‌ ಕಾಂಶಿರಾಮ್‌ ಅವರ 91 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಈ ವೇಳೆ ಬಿಎಸ್ಪಿ ಜಿಲ್ಲಾಧ್ಯಕ್ಷ ಅಂಜನಮೂರ್ತಿ, ಉಪಾಧ್ಯಕ್ಷ ಇಮ್ತಿಯಾಜ್‌ ಪಾಷ, ಜಿಲ್ಲಾ ಉಸ್ತುವಾರಿ ರಂಗನಾಥ್‌, ಪ್ರಧಾನ ಕಾರ್ಯದರ್ಶಿ ಸುಧಾಕರ್‌, ಮೊಹಮ್ಮದ್‌ ಹುಸೇನ್‌ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.

ಜಿಲ್ಲಾ ಬಿಎಸ್ಪಿ ಉಸ್ತುವಾರಿ ಅಣ್ಣೆನಹಳ್ಳಿ ಗೋಪಾಲ್‌ ಮಾತನಾಡಿ ಈ ದೇಶ ರಾಜಕೀಯ ಮಾಡೋದನ್ನು ಕಲಿಸಿದ್ದೆ ಕಾಂಶಿರಾಂ ಸಾಹೇಬರು ಎಂದರು, ಇನ್ನು ದೇಶದಲ್ಲಿ ಮನಸ್ಮೃತಿ ಹೆಚ್ಚುತ್ತಿದ್ದು, ಇದನ್ನು ತಡೆಯಲು ಬಿಎಸ್ಪಿ ಪಕ್ಷದಿಂದ ಮಾತ್ರ ಸಾಧ್ಯ ಎಂದರು. ಇನ್ನು ಇಮ್ತಿಯಾಜ್‌ ಪಾಷ ಮಾತನಾಡಿ ದೇಶದಲ್ಲಿ ಮನುವಾದಿಗಳು ಜಾತಿ ಜಾತಿಗಳ ನಡುವೆ ಗೊಂದಲ ಸೃಷ್ಟಿಸ್ತಿದ್ದು. ಹಿಂದೂ, ಮುಸ್ಲಿಂ ಹಲಾಲ್, ಹಿಜಾಬ್ ಎಂದು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಆದ್ದರಿಂದ ನಾವುಗಳು ವೈಚಾರಿಕ ಚಿಂತನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ದೇಶ ಸುಭದ್ರವಾಗಿರುತ್ತೇ ಎಂದರು.

ಬಿಎಸ್ಪಿ ಪಕ್ಷದ ಶಿರಾ ಉಸ್ತುವಾರಿ ರಂಗನಾಥ್ ಮಾತನಾಡಿ ಸರ್ವ ಧರ್ಮಗಳ ಒಳತಿಗಾಗಿ ಹಗಲಿರುಳು ಶ್ರಮಿಸಿದ ಮಹಾನ್ ಚೇತನ ಕಾಂಶಿರಾಮ್. ಇವರ ಜನ್ಮ ಜಯಂತಿ ಆಚರಣೆ ಮಾಡುತ್ತಿರುವುದು ನಮ್ಮ ಹೆಮ್ಮೇ ಎಂದರು. ದೇಶದಲ್ಲಿ ಮೌನ ಕ್ರಾಂತಿ ಮಾಡಿದ ಮಹಾನ್ ಚೇತನ. ದಾದ ಸಾಹೇಬ್ ಕಾಂಶಿರಾಮ್ ದೇಶದ ಎಂಟನೇ ಅದ್ಭುತ ಎಂದರೆ ತಪ್ಪಾಗಲಾರದು ಎಂದರು.

Author:

share
No Reviews