ತುಮಕೂರು : ಅಪರಾಧ ತಡೆಗೆ 112 ಬಳಸುವಂತೆ ಮಧುಗಿರಿ DYSP ಸೂಚನೆ

ಜನ ಸಂಪರ್ಕ ಸಭೆ
ಜನ ಸಂಪರ್ಕ ಸಭೆ
ತುಮಕೂರು

ತುಮಕೂರು : ಮಧುಗಿರಿ ಪಟ್ಟಣದ ಪೊಲೀಸ್‌ ಆವರಣದಲ್ಲಿ ಜನ ಸಂಪರ್ಕ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಸಭೆಯಲ್ಲಿ ಗ್ರಾಮೀಣ ಭಾಗದಲ್ಲಿ ಮಧ್ಯ ಮಾರಾಟ ನಿಯಂತ್ರಣದ ಬಗ್ಗೆ ,ಹಲವು ಪ್ರಮುಖ ರಸ್ತೆಗಳಲ್ಲಿ ರಸ್ತೆ ಹುಬ್ಬುಗಳನ್ನು ನಿರ್ಮಿಸುವ ಬಗ್ಗೆ, ಗ್ರಾಮಾಂತರ ಪ್ರದೇಶಕ್ಕೆ ಸಕಾಲಕ್ಕೆ ಕೆಎಸ್ಆರ್ ಟಿಸಿ ಬಸ್ ಗಳನ್ನು ಓಡಿಸುವ ಬಗ್ಗೆ ಹಾಗೂ ಮಹಿಳೆಯರ ಸರಗಳ್ಳತನ ವಾಗುತ್ತಿರುವುದನ್ನು ನಿಯಂತ್ರಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಡಿವೈಎಸ್‌ಪಿ ಮಂಜುನಾಥ್‌, ಅಪರಾಧಗಳನ್ನು ತಡೆಗಟ್ಟುವ ಸಲುವಾಗಿ 112  ಬಳಸುವಂತೆ ಸಾರ್ವಜನಿಕರಿಗೆ ಕಿವಿಮಾತು ತಿಳಿಸಿದರು. ಸಾರ್ವಜನಿಕ ಸಭೆಯಲ್ಲಿ ಕೇಳಿ ಬಂದಂತ ದೂರುಗಳನ್ನು ಆಲಿಸಿದ್ದು ಟ್ರಾಫಿಕ್ ಸಮಸ್ಯೆ ಬೈಪಾಸ್ ರಸ್ತೆಯಲ್ಲಿ ಬೈಕ್ ವೀಲಿಂಗ್ ,ರಸ್ತೆ ಸುರಕ್ಷತಾ ಬಗ್ಗೆ, ವಿದ್ಯಾರ್ಥಿನಿಯರನ್ನು ಚುಡಾಯಿಸುವುದರ ಬಗ್ಗೆ ಹಾಗೂ ಹಲವು ಇಲಾಖೆಗಳಿಂದ ಆಗಬೇಕಾದ ಕೆಲಸಗಳ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ವೇಳೆ ಮುಖಂಡರಾದ ರಾಮು ಮಾತನಾಡಿ, ಇತ್ತೀಚೆಗೆ ನಡೆದ ಸರ ಗಳ್ಳತನದ ಬಗ್ಗೆ ಪೊಲೀಸರು ತೆಗೆದುಕೊಂಡ ಕ್ರಮದಿಂದಾಗಿ ವೃದ್ದೆಗೆ ಬಂಗಾರದ ಸರ ವಾಪಸ್ ಆಗಿರುವುದರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಈ ಸಭೆಯಲ್ಲಿ ಸಿಪಿಐ ಹನುಮಂತರಾಯಪ್ಪ ಪಿಎಸ್ಐ ಗಳಾದ ವಿಜಯಕುಮಾರ್, ಮುತ್ತುರಾಜ್ ಹಾಗು ಪೊಲೀಸ್ ಸಿಬ್ಬಂದಿ ಹಾಗೂ ನಾಗರೀಕರು ಸಭೆಯಲ್ಲಿ ಹಾಜರಿದ್ದರು.

Author:

...
Editor

ManyaSoft Admin

Ads in Post
share
No Reviews