ತುಮಕೂರು : ಸ್ಮಶಾನದ ಜಾಗವನ್ನು ಅಭಿವೃದ್ಧಿ ಮಾಡಿ ಇಲ್ಲವಾದ್ರೆ ಉಗ್ರ ಹೋರಾಟದ ಎಚ್ಚರಿಕೆ

ತುಮಕೂರು :

ಹುಟ್ಟು- ಸಾವು ವಿಧಿಯ ಲಿಖಿತ ಸಾವಿಲ್ಲದ ಮನೆ ಇಲ್ಲ ಎಂಬಂತೆ, ಹುಟ್ಟಿದ ಮನುಷ್ಯ ಒಂದಲ್ಲಾ ಒಂದು ದಿನ ಸಾಯಲೇ ಬೇಕು, ಆದರೆ ಇಲ್ಲಿ ಸತ್ತ ವ್ಯಕ್ತಿಗೆ ಸಿಗಬೇಕಾದ ಮುಕ್ತಿ ಸಿಗದಂತಹ ಸ್ಥಿತಿ ಇದೆ. ಹೌದು ತುಮಕೂರು ಗ್ರಾಮಾಂತರ ಕ್ಷೇತ್ರದ ಬಳಗೆರೆ ಗ್ರಾಮ ಪಂಚಾಯ್ತಿಯಲ್ಲಿ ಸತ್ತ ವ್ಯಕ್ತಿಗೆ ಅಂತ್ಯ ಸಂಸ್ಕಾರ ಮಾಡಲು ಜಾಗ ಇಲ್ಲ, ಜಾಗ ಗುರುತಿಸಿದರೂ ಆ ಜಾಗವನ್ನು ಅಭಿವೃದ್ಧಿ ಪಡಿಸದಿರೋದರಿಂದ ಗಿಡ ಗಂಟೆಗಳು ಬೆಳೆದು ನಿಂತಿವೆ. ಜೊತೆಗೆ ದೊಡ್ಡ ದೊಡ್ಡ ಕಲ್ಲುಗಳಿದ್ದು ಈವರೆಗೂ ಅಭಿವೃದ್ಧಿ ಪಡಿಸಲಾಗಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬಳಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ 8 ಕಂದಾಯ ಗ್ರಾಮಗಳು ಬರಲಿದ್ದು, ಬಳಗೆರೆ ಗ್ರಾಮವೊಂದರಲ್ಲೇ ಸುಮಾರು 2 ಸಾವಿರ ಮಂದಿ ಜನರಿದ್ದಾರೆ. ಬಳಗೆರೆ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಸುಮಾರು 70 ಪರ್ಸೆಂಟ್‌ ಮಂದಿ ಭೂಮಿ ಉಳ್ಳವರಾಗಿದ್ದು, ಸತ್ತರೆ ಅವರ ಜಮೀನಿನಲ್ಲೇ ಅಂತ್ಯಸಂಸ್ಕಾರ ಮಾಡ್ತಾರೆ. ಉಳಿದ 30 ಪರ್ಸೆಂಟ್‌ ಮಂದಿ ಸತ್ತರೆ ಅವರ ಅಂತ್ಯಸಂಸ್ಕಾರ ಮಾಡಲು ಜಾಗವೇ ಇಲ್ಲ, ಇಲ್ಲಿ ಜನ  ಸತ್ತರೆ ಎಲ್ಲಿ ಮಣ್ಣು ಮಾಡಬೇಕು ಅಂತಾ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಸರ್ವೇ ನಂಬರ್‌ 38, 39ರಲ್ಲಿ ಸುಮಾರು 20 ಗುಂಟೆ ಜಮೀನನ್ನು ಸ್ಮಶಾನಕ್ಕೆ ನೀಡಲಾಗಿದೆ. ಆದರೆ ಈ ಜಾಗ ಕಲ್ಲು ಗುಡ್ಡೆ ಜಾಗವಾಗಿದೆ. ಗಿಡ ಗಂಟೆಗಳು ಬೆಳೆದಿದ್ದು ಅಂತ್ಯಸಂಸ್ಕಾರ ಮಾಡಲು ಯೋಗ್ಯವಾಗಿಲ್ಲ. ಇನ್ನು ಈ ಜಾಗವನ್ನು ಅಭಿವೃದ್ಧಿ ಮಾಡಲು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ನೀಡಲಾಗಿಲ್ಲ. ಇದರಿಂದ ಸ್ಮಶಾನದ ಜಾಗವನ್ನು ಅಭಿವೃದ್ಧಿ ಪಡಿಸಲಾಗದೇ ಅಂತ್ಯಸಂಸ್ಕಾರಕ್ಕೆ ಹೆಣಗಾಡುವಂತಾಗಿದೆ, ಕೂಡಲೇ ಈ ಬಗ್ಗೆ ಅಧಿಕಾರಿಗಳು ಗಮನ ಹರಸಿ ಅಂತ್ಯ ಸಂಸ್ಕಾರದ ಜಾಗದ ಅಭಿವೃದ್ಧಿಗೆ ಮುಂದಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ವೆಂಕಟೇಶ್‌ ಎಚ್ಚರಿಕೆ ನೀಡಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews