ತುಮಕೂರು : ಆಟೋಗಳ ಮೇಲೆ FC ಅಸ್ತ್ರ | RTO, ಪೊಲೀಸರ ವಿರುದ್ಧ ಸಮರ

ತುಮಕೂರು:

ತುಮಕೂರು ನಗರದ ಆಟೋ ಚಾಲಕರಿಗೆ RTO ಹಾಗೂ ಪೊಲೀಸ್‌ ಇಲಾಖೆ ಶಾಕ್‌ ನೀಡಲು ಮುಂದಾಗಿದ್ದು, FC ಇಲ್ಲದ ಆಟೋಗಳನ್ನು ಸೀಜ್‌ ಮಾಡಲು ಮುಂದಾಗಿದೆ. ಇದರಿಂದ ಆಟೋ ಚಾಲಕರಲ್ಲಿ ಸಣ್ಣದೊಂದು ನಡುಕ ಸೃಷ್ಟಿಯಾಗಿದೆ. ತುಮಕೂರು ನಗರದಲ್ಲಿ 12,500 ಆಟೋಗಳು ಸಂಚರಿಸುತ್ತಿವೆಆ ಆಟೋಗಳಲ್ಲಿ 5224 ಆಟೋಗಳು ಇನ್ನು ಎಫ್ ಸಿ ಮಾಡಿಸಿಲ್ಲ. ಎಫ್ ಸಿ ಇಲ್ಲದ ಆಟೋಗಳಿಗೆ ಇನ್ಸುರೆನ್ಸ್ ಕೂಡ ಬರೋದಿಲ್ಲ. ಒಂದು ವೇಳೆ ಅಪಘಾತ ಸಂದರ್ಭದಲ್ಲಿ ಅಪಘಾತ ಕ್ಲೈಂ ಮಾಡಲು ಆಗಲ್ಲ. ಪ್ರಯಾಣಿಕರ ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಿರುವ ಹಿನ್ನೆಲೆಯಲ್ಲಿ ಎಫ್ ಸಿ ಇಲ್ಲದ ಆಟೋಗಳನ್ನು ಸೀಜ್ ಮಾಡಲು ಆರ್ ಟಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಮುಂದಾಗಿದೆ.

ಪೊಲೀಸ್ ಇಲಾಖೆ ಮತ್ತು ಆರ್ ಟಿ ನಿರ್ಧಾರಕ್ಕೆ ಆಟೋ ಚಾಲಕರ ಸಂಘ ಸೆಡ್ಡು ಹೊಡೆಯಲು ಮುಂದಾಗಿದೆಮನಸೋ ಇಚ್ಛೆ ಆಟೋಗಳಿಗೆ ಫರ್ಮಿಟ್ ಕೊಟ್ಟ ಇಲಾಖೆ ಹಾಗೂ ತುಮಕೂರಿನಲ್ಲಿದ್ದ 30 ಆಟೋ ನಿಲ್ದಾಣಗಳನ್ನು ಪಾಲಿಕೆ ಕೆಡವಿದೆ. ಇದರಿಂದ ಆಟೋ ಚಾಲಕರು ಅತಂತ್ರರಾಗಿದ್ದಾರೆ. ಎಷ್ಟೋ ಆಟೋಗಳು ಮನೆ ಮುಂದೆಯೇನಿಂತಿವೆ, ಅದರ ಜೊತೆಗೆ ಆರ್ ಟಿ ಯದ್ವಾತದ್ವಾ ಹೊಸದಾಗಿ ಫರ್ಮಿಟ್ ಕೊಡುತ್ತಿದೆ. ಇದರಿಂದಾಗಿ ಆಟೋಗಳ ಸಂಖ್ಯೆ ಹೆಚ್ಚಾಗಿ ಬಾಡಿಗೆ ಸಿಗುತ್ತಿಲ್ಲ. ಎಫ್ ಸಿ ಮಾಡಲು 1 ಸಾವಿರ ರೂ ಕಟ್ಟಬೇಕು, ಆದರೆ ಆರ್ ಟಿ ಅಧಿಕಾರಿಗಳಿಗೆ 2 ಸಾವಿರ ರೂಪಾಯಿ ಲಂಚ ಕೊಡಬೇಕಾದ ಪರಿಸ್ಥಿತಿ ಇದೆ. ಇದೆಲ್ಲಾದಕ್ಕೆ ಆರ್ ಟಿ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಂಡರೆ ನಾವು ಎಫ್ ಸಿ ಮಾಡಿಸುತ್ತೇವೆ ಇಲ್ಲದೇ ಇದ್ದರೆ ಮಾಡಿಸೋದೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಇನ್ನೊಂದೆಡೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಇರೋದರಿಂದ ಆಟೋ ಚಾಲಕರು ದುಡಿಯೋದೇ ಕಷ್ಟವಾಗ್ತಿದೆ. ಒಂದೊತ್ತು ಊಟಕ್ಕೂನಾವು ಪರದಾಡುವಂತಾಗಿದೆ. ಹೀಗಿದ್ದಾಗ ಲಂಚದ ಹಣ ಸೇರಿಸಿ ನಾವು ಎಫ್ ಸಿ ಮಾಡಿಸೋದು ಹೇಗೆ ಸಾಧ್ಯ ಎಂದು ಆಟೋ ಚಾಲಕರು ಅಳಲು ತೋಡಿಕೊಂಡಿದ್ದಾರೆ.

ಮಾರ್ಚ್‌ನಿಂದ ಆಟೋ ಚಾಲಕರಿಗೆ ಹೊಸ ಗೈಡ್‌ಲೈನ್ಸ್‌ ತರ್ತೀವಿ ಅಂತಾ ಎಸ್‌ಪಿ ಹೇಳಿದರು. ಇದೀಗ ಜಾರಿಯಾಗಿದೆ. ಇದರಿಂದ ಆಟೋ ಚಾಲಕರು ಹಾಗೂ RTO, ಪೊಲೀಸ್‌ ಇಲಾಖೆ ಮಧ್ಯೆ ಸಮರ ಶುರುವಾಗಿದ್ದು, ಮುಂದೆ ಯಾವ ರೀತಿ ಸ್ವರೂಪ ಪಡೆದುಕೊಳ್ಳುತ್ತೋ ಎಂದು ಕಾದುನೋಡಬೇಕಿದೆ.

Author:

share
No Reviews