ಚಿಕ್ಕಬಳ್ಳಾಪುರ :
ಸಿಬ್ಬಂದಿಗಳನ್ನು ವಿಮಾನ ನಿಲ್ದಾಣದ ಒಳಭಾಗಕ್ಕೆ ಬಿಟ್ಟು ಬರುತ್ತಿದ್ದ ಟಿಟಿ ವಾಹನವೊಂದು ನಿಲ್ದಾಣದಲ್ಲಿ ಇಂಜಿನ್ ರಿಪೇರಿಯಿಂದ ಕೆಟ್ಟು ನಿಂತಿದ್ದ ಇಂಡಿಗೋ ವಿಮಾನಕ್ಕೆ ಡಿಕ್ಕಿ ಹೊಡೆದು ಟಿಟಿ ವಾಹನ ನಜ್ಜುಗುಜ್ಜಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿನಿತ್ಯ ಲಕ್ಷಾಂತರ ಜನ ಪ್ರಯಾಣಿಸುತ್ತಾರೆ. ಇನ್ನು ಇದಕ್ಕಾಗಿ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಗಳ ಅನುಕೂಲಕ್ಕಾಗಿ ಟಿಟಿ ವಾಹನವನ್ನು ಒದಗಿಸಲಾಗಿದೆ. ವಿಮಾನ ನಿಲ್ದಾಣದ ಒಳಭಾಗಕ್ಕೆ ಸಿಬ್ಬಂದಿಗಳನ್ನು ಟಿಟಿ ವಾಹನದಲ್ಲಿ ಕರೆದೊಯ್ಯಲಾಗುತ್ತೆ. ಈ ವೇಳೆ ಸಿಬ್ಬಂದಿಗಳನ್ನು ಬಿಟ್ಟು ಬರುತ್ತಿದ್ದ ಟಿಟಿ ವಾಹನ ಕೆಟ್ಟು ನಿಂತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆದಿದೆ.
ಇನ್ನು ಟಿಟಿ ವಾಹನ ಚಾಲಕನ ಅಜಾಗರೂಕತೆಯಿಂದ ಈ ಅವಘಡ ಸಂಭವಿಸಿದ್ದು, ಪಾರ್ಕಿಂಗ್ ನಲ್ಲಿ ಹಲವು ದಿನಗಳಿಂದ ಇಂಜಿನ್ ರಿಪೇರಿಯಾಗಿ ನಿಂತಿದ್ದ ವಿಮಾನಕ್ಕೆ ಏಕಾಏಕಿ ಡಿಕ್ಕಿ ಹೊಡೆದು ನಜ್ಜುಗುಜ್ಜಾಗಿದೆ. ಸದ್ಯ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಇನ್ನು ಈ ಕುರಿತಾಗಿ ನಾಗರೀಕ ವಿಮಾನಯಾನ ಇಲಾಖೆ ಅಧಿಕಾರಿಗಳು ಮತ್ತು ಏರ್ ಪೋರ್ಟ್ ಸಿಬ್ಬಂದಿ ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.