ತರಕಾರಿ ಮತ್ತು ಹಣ್ಣುಗಳ ಜ್ಯೂಸ್ ದೇಹದ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ. ಇದು ಕಾಂತಿಯುತ ಮೈಬಣ್ಣ ನೀಡುತ್ತದೆ. ಸುಂದರವಾದ, ಆರೋಗ್ಯಕರ ಚರ್ಮವನ್ನು ಪಡೆಯಲು ತರಕಾರಿಯ ಜ್ಯೂಸ್ಗಳು ಪರಿಣಾಮ ಕಾರಿಯಾ ಗಿವೆ. ಈ ಜ್ಯೂಸ್ಗಳು ಚರ್ಮಕ್ಕೆ ಪ್ರಮುಖವಾದ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ನೀಡುವ ಮೂಲಕ ಒಳಗಿನಿಂದ ಪೋಷಿಸುತ್ತದೆ. ತರಕಾರಿ ಮತ್ತು ಹಣ್ಣುಗಳ ಜ್ಯೂಸ್ ದೇಹದ ಶುದ್ಧೀಕರಣಕ್ಕೆ ಸಹ ಸಹಾಯ ಮಾಡುತ್ತದೆ. ಇದು ಕಾಂತಿಯುತ ಮೈಬಣ್ಣ ನೀಡುತ್ತದೆ.
1.ಕಿತ್ತಳೆ ಜ್ಯೂಸ್: ವಿಟಮಿನ್ ಸಿ ಮತ್ತು ಫ್ಲೇವನಾಯ್ಡ್ ಭರಿತ ಕಿತ್ತಳೆ ಜ್ಯೂಸ್ನಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿದ್ದು, ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಿ, ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ.
2.ಬೀಟ್ರೂಟ್ ಜ್ಯೂಸ್: ವಿಟಮಿನ್ ಮತ್ತು ಬೆಟಾಲೈನ್ ಭರಿತವಾಗಿರುವ ಬೀಟ್ರೂಟ್ ಉತ್ಕರ್ಷಣ ನಿರೋಧಕ ರಕ್ಷಣೆಯನ್ನು ಹೆಚ್ಚಿಸುತ್ತದೆ. ಹಾಗೇ, ಆಕ್ಸಿಡೇಟಿವ್ ಹಾನಿಯಿಂದ ಜೀವಕೋಶಗಳನ್ನು ರಕ್ಷಿಸುತ್ತದೆ. ಬೀಟ್ರೂಟ್ ಜ್ಯೂಸ್ ಆರೋಗ್ಯಕರ ಆಯ್ಕೆಯಾಗಿದ್ದು ಅದು ಹೃದಯರಕ್ತನಾಳದ ಸಮಸ್ಯೆಗಳನ್ನು ನಿಯಂತ್ರಿಸಲು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
3.ದಾಳಿಂಬೆ ಜ್ಯೂಸ್: ದಾಳಿಂಬೆ ಜ್ಯೂಸ್ ವಿಟಮಿನ್ ಸಿ, ಸಿಟ್ರಿಕ್ ಆಮ್ಲ ಮತ್ತು ಅಮೈನೋ ಆಮ್ಲಗಳನ್ನು ಹೊಂದಿದೆ. ಇದು ಚರ್ಮದ ಆರೋಗ್ಯಕ್ಕೆ ಉಪಯುಕ್ತವಾಗಿದೆ.
4.ಪಾಲಕ್ ಜ್ಯೂಸ್: ಪಾಲಕ್ ಜ್ಯೂಸ್ನಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಇವೆ. ಇದು ಚರ್ಮದ ಕಾಂತಿ ಹೆಚ್ಚಿಸಲು ಸಹಕಾರಿಯಾಗಿದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು, ಖನಿಜಗಳು ಮತ್ತು ನಾರಿನಂಶವೂ ಅಧಿಕವಾಗಿದೆ.
೫.ಪಪ್ಪಾಯಿ ಜ್ಯೂಸ್: ಪಪ್ಪಾಯಿಯಲ್ಲಿ ಕಂಡುಬರುವ ಒಂದು ಫೋಟೋಪ್ರೊಟೆಕ್ಟರ್ ಮತ್ತು ನೈಸರ್ಗಿಕ ಸೌಂದರ್ಯ ವರ್ಧಕ ಬೀಟಾ-ಕ್ಯಾರೋಟಿನ್, ಸೂರ್ಯನ ನೇರಳಾತೀತ ಕಿರಣದ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಚರ್ಮವನ್ನು ರಕ್ಷಿಸುತ್ತದೆ ಮತ್ತು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ.