ಕೊರಟಗೆರೆ:
ಕೊರಟಗೆರೆ ಪಟ್ಟಣದ ಲಕ್ಷ್ಮೀ ನರಸಿಂಹಸ್ವಾಮಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಜೆಡಿಎಸ್‌ನ ನೂತನ ತಾಲೂಕು ಅಧ್ಯಕ್ಷರಾಗಿ ಕಾಮರಾಜು, ಕಾರ್ಯಧ್ಯಕ್ಷರಾಗಿ ಲಕ್ಷ್ಮೀಶ್ ಮತ್ತು ಯುವಧ್ಯಕ್ಷ ವೆಂಕಟೇಶ್ ಅಧಿಕಾರ ಸ್ವೀಕರಿಸಿದ್ರು. ಇವರ ಜೊತೆಗೆ ಪಧಾಧಿಕಾರಿಗಳಾಗಿ ಆಯ್ಕೆಯಾದ 25ಕ್ಕೂ ಅಧಿಕ ಮುಖಂಡರಿಗೆ ಆದೇಶ ಪ್ರತಿಯನ್ನು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ವಿತರಿಸಿದ್ರು. ಸಮಾರಂಭದಲ್ಲಿ ಜೆಡಿಎಸ್ ಮುಖಂಡರಾದ ಸಿದ್ದಮಲ್ಲಪ್ಪ, ರಮೇಶ್, ಲಕ್ಷ್ಮೀ ನಾರಾಯಣ್, ಮಾವತ್ತೂರು ಮಂಜುನಾಥ, ಎಲ್.ವಿ.ಪ್ರಕಾಶ್, ಪಾರೂಕ್ ಅಹಮ್ಮದ್, ಲಕ್ಷ್ಮೀ ನರಸಪ್ಪ, ಕೌಶಿಕ್, ನಾಗರಾಜು, ಹಯತ್ ಅಹಮ್ಮದ್ ಸೇರಿದಂತೆ ಹಲವು ಉಪಸ್ಥಿತರಿದ್ದರು.
ಮಾಜಿ ಪ್ರಧಾನಿ ದೇವೆಗೌಡ ಮತ್ತು ಕೇಂದ್ರಸಚಿವ ಕುಮಾರಸ್ವಾಮಿ ಆದೇಶದಂತೆ ಜೆಡಿಎಸ್ ಪಕ್ಷದ ನೂತನ ಅಧ್ಯಕ್ಷರು ಮತ್ತು ಪಧಾದಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತೀದೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು. ಅಲ್ದೇ ಕೊರಟಗೆರೆ ಕ್ಷೇತ್ರದ ಜೆಡಿಎಸ್ ಪಕ್ಷದ ಪಧಾಧಿಕಾರಿಗಳಾಗಿ ಆಯ್ಕೆಯಾದ ಪ್ರತಿಯೊಬ್ಬರು ಗ್ರಾಪಂ ಮತ್ತು ಬೂತ್‌ಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಸಭೆ ನಡೆಸಬೇಕು. ಮುಂದಿನ ಜಿಪಂ, ತಾಪಂ ಮತ್ತು ಗ್ರಾಪಂ ಚುನಾವಣೆಗೆ ನಾವು ಈಗಲೇ ಸಿದ್ದವಾಗಬೇಕಿದೆ ಎಂದು ಕರೆ ನೀಡಿದರು.
ಕೊರಟಗೆರೆ ಕ್ಷೇತ್ರದ ಜೆಡಿಎಸ್ ನೂತನ ಅಧ್ಯಕ್ಷ ಕಾಮರಾಜು ಮಾತನಾಡಿ ಜೆಡಿಎಸ್ ಪಕ್ಷ ನನಗೇ ಹೆಚ್ಚಿನ ಜವಾಬ್ದಾರಿ ನೀಡಿದೆ. ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ. ಪ್ರಾಮಾಣಿಕ ಕಾರ್ಯಕರ್ತರು ಜೆಡಿಎಸ್ ಪಕ್ಷದಲ್ಲಿದೆ ಎಂಬುದೇ ಹೆಮ್ಮೆಯ ವಿಷಯ. ಪ್ರತಿ ಗ್ರಾಮಕ್ಕೂ ಬೇಟಿನೀಡಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.