BELAGAVI: ಬೆಳಗಾವಿಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ

ಎರಡು ಗುಂಪುಗಳ ನಡುವೆ ಹೊಡೆದಾಟ
ಎರಡು ಗುಂಪುಗಳ ನಡುವೆ ಹೊಡೆದಾಟ
ಬೆಳಗಾವಿ

ಬೆಳಗಾವಿ: 

ಎರಡು ಗುಂಪುಗಳ ಮಧ್ಯೆ ಮಾರಾಮಾರಿಯಾಗಿರುವ ಘಟನೆ ಬೆಳಗಾವಿ ತಾಲೂಕಿನ ಹಳೆ ವಂಟಮೂರಿ ಗ್ರಾಮದಲ್ಲಿ ನಡೆದಿದೆ. ಜಾಗದ ವಿಚಾರದ ಕುರಿತು  ಕಲ್ಲು ತೂರಿ ಎರಡು ಗುಂಪುಗಳು ಮಾರಕಾಸ್ತ್ರಗಳಿಂದ ಹೊಡೆದಾಡಿದ್ದಾರೆ. ಮಾರುತಿ ವಣ್ಣೂರೆ ಮತ್ತು ಪರಸಪ್ಪ ಹೋಳಿಕಾರ ಎಂಬ ಕುಟುಂಬಗಳ ಮಧ್ಯೆ ಗಲಾಟೆ ನಡೆದಿದ್ದು, ಹೊಡೆದಾಟದಲ್ಲಿ ಹಲವರಿಗೆ ಗಾಯಗಳಾಗಿದ್ದು, ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ.

ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ಆಗಿದ್ದು, ಹೆಂಚು ಹಾಗೂ ಕುಡುಗೋಲಿನಿಂದ ಬಡಿದಾಡಿಕೊಂಡಿದ್ದಾರೆ. ಮನೆಯ ಛಾವಣಿ ಮೇಲೆ ಹತ್ತಿ ಹೆಂಚು ಹಾಗೂ ಕಲ್ಲು ತೂರಾಟ ನಡೆಸಿ, ನಿಂಗವ್ವ ವಣ್ಣೂರ ಅವರ ಮೇಲೆ ಪರಸಪ್ಪ, ಭರಮಪ್ಪ, ಅಪ್ಪಣ್ಣಸಹೋದರರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

 

Author:

share
No Reviews