ಕ್ರಿಕೆಟ್:
ಕಳೆದ ಆವೃತ್ತಿಯಲ್ಲಿ ತಂಡವನ್ನು ಪ್ರಶಸ್ತಿಯೆಡೆ ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್ ಈ ಬಾರಿ ಕೋಲ್ಕೊತಾ ನೈಟ್ ರೈಡರ್ಸ್ ಪ್ಲೇಆಫ್ ಪ್ರವೇಶದ ಕನಸಿಗೆ ತೊಡಕಾಗಿದ್ದಾರೆ. ಶನಿವಾರ ಕೆಕೆಆರ್, ಶ್ರೇಯಸ್ ಅಯ್ಯರ್‌ರವರ ನೂತನ ನಾಯಕತ್ವದ ಪಂಜಾಬ್ ತಂಡವನ್ನು ಎದುರಿಸಲಿದೆ. ಇಂದು ಪಂಜಾಬ್ ಕಿಂಗ್ಸ್ ಮತ್ತು ಕೊಲ್ಕಾತ್ತ ನೈಟ್ ರೈಡರ್ಸ್ ತಂಡಗಳು ಈಡನ್ ಗಾರ್ಡನ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ.
ಶ್ರೇಯಸ್ ಅಯ್ಯರ್ ಪ್ರಸಕ್ತ ಆವೃತ್ತಿಯಲ್ಲಿ 3 ಅರ್ಧ ಶತಕಗಳನ್ನು ಬಾರಿಸಿ ಒಟ್ಟು 263 ರನ್ ಕಲೆ ಹಾಕಿ ತಂಡಕ್ಕೆ ಆಸರೆ ಒದಗಿಸಿದ್ದಾರೆ. ಆದರೆ ಈ ಹಿಂದಿನ ಪಂದ್ಯಗಳಲ್ಲಿ ಒಂದಂಕಿ ಮೊತ್ತಕ್ಕೆ ಸೀಮಿತರಾಗಿರುವ ಅಯ್ಯರ್ ತಮ್ಮ ಫಾರ್ಮನ್ನು ಕಂಡುಕೊಳ್ಳಬೇಕಿದೆ. ಪ್ರಸ್ತುತ ಡೆಲ್ಲಿ ತಂಡದ K.L ರಾಹುಲ್ ತಮ್ಮ ಹಿಂದಿನ ತಂಡ ಲಖನೌ ವಿರುದ್ಧದ ಪಂದ್ಯದಲ್ಲಿ 57 ರನ್ ಸಿಡಿಸಿ ಗೆಲುವಿಗೆ ಕಾರಣರಾಗಿದ್ದರು. ಅಂಥದ್ದೇ ಅವಕಾಶವೊಂದು ಶ್ರೇಯಸ್ ಅಯ್ಯರ್ ಮುಂದಿದೆ. ಅದನ್ನವರು ಬಳಸಿಕೊಳ್ಳುವರೇ ಇಲ್ಲವೇ ಎಂಬುದು ಕುತೂಹಲ ಮೂಡಿಸಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಅಜಿಂಕ್ಯ ರಹಾನೆ, ರೆಹಮಾನ್ ಉಲ್ಲಾ ಗುರ್ಬಾಜ್, ಸುನಿಲ್ ನರೈನ್,, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮೊಯಿನ್ ಅಲಿ, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ,ಆಂಗ್ಕ್ರಿಶ್ ರಘುವಂಶಿ ಇದ್ದಾರೆ.
ಪಂಜಾಬ್ ಕಿಂಗ್ಸ್ ತಂಡದಲ್ಲಿ ಶ್ರೇಯಸ್ ಅಯ್ಯರ್, ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್,, ಜೋಶ್ ಇಂಗ್ಲಿಸ್, ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಜಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ಹರ್ಪ್ರೀತ್ ಬ್ರಾರ್, ಅರ್ಶದೀಪ್ ಸಿಂಗ್, ಯುಜುವೇಂದ್ರ ಚಹಲ್ ಇದ್ದಾರೆ.