ಟ್ರಾಕ್ಟರ್ ನಲ್ಲಿ ಉಳುಮೆ ಮಾಡುವಾಗ ಕೃಷಿ ಹೊಂಡಕ್ಕೆ ಬಿದ್ದು ತಿಪಟೂರು ಮೂಲದ ಯುವಕ ಸಾವು

ತಿಪಟೂರು.ಸಾರ್ಥವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಲತಹ ಮಾವಿನಹಳ್ಳಿ ಯವರಾಗಿದ್ದು, ನೆಲಗೊಂಡನಹಳ್ಳಿ ತೋಟದ ಮನೆಯಲ್ಲಿ ವಾಸವಿದ್ದರು.


ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಕೀರ್ತನ.ವಿ (19 ವರ್ಷ ) ಮೃತ ದುರ್ದೈವಿ.


 ಸಂಜೆ 4:30 ವೇಳೆಯಲ್ಲಿ ತಮ್ಮ ತೋಟದಲ್ಲಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುತ್ತಿದ್ದ ಸಂದರ್ಭದಲ್ಲಿ, ತೋಟದಲ್ಲಿದ್ದ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ವಿದ್ಯಾರ್ಥಿಯು ನೇತ್ರದಾನವನ್ನು ಮಾಡಿ ಸಾವಿನಲ್ಲು ಸಾರ್ಥಕತೆ ಮೆರೆದಿದ್ದಾನೆ. ಘಟನೆಯು ಹೊನ್ನವಳ್ಳಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ. 

 
ಮೃತರ ತಂದೆ: ವಿರುಪಾಕ್ಷ ಮೂರ್ತಿ ಕೃಷಿಕರಾಗಿದ್ದು, ತಾಯಿ :ಕೆ.ಜಿ. ಕಲಾವತಿ ಬಿ.ಮುದ್ದೇನಹಳ್ಳಿ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Author:

...
Shabeer Pasha

Managing Director

prajashakthi tv

share
No Reviews