ತಿಪಟೂರು:
ದೇವಾಲಯದ ಮುಂದೆ ವಾಮಾಚಾರ ಮಾಡಿ ಬಾಗಿಲಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಹಟ್ಟ ಗ್ರಾಮದ ತೋಪಿನಲ್ಲಿರುವ ಕೆಂಪಮ್ಮದೇವಿ ದೇವಸ್ಥಾನದಲ್ಲಿ ನಡೆದಿದೆ.
ರಾತ್ರಿ ವೇಳೆಯಲ್ಲಿ ದೇವಾಲಯದ ಹತ್ತಿರ ಯಾರು ಇಲ್ಲದ್ದನ್ನು ಗಮಿನಿಸಿದ ಕಿಡಿಗೇಡಿಗಳು ದೇವಾಲಯದ ಮುಂದೆ ವಾಮಾಚಾರ ಮಾಡಿ ನಂತರ ವಾಮಾಚಾರದ ವಸ್ತುಗಳಿಗೆ ಬೆಂಕಿ ಹಚ್ಚಿದ್ದು, ಬೆಂಕಿಯು ಸಂಪೂರ್ಣ ಬಾಗಿಲಿಗೆ ಆವರಿಸಿದ್ದರ ಪರಿಣಾಮ ದೇವಾಲಯದ ಬಾಗಿಲು ಸುಟ್ಟು ಹೋಗಿದೆ. ಬೆಳಿಗ್ಗೆ ಆರ್ಚಕ ಎಂದಿನಂತೆ ಪೂಜೆಗೆಂದು ದೇವಸ್ಥಾನದ ಬಳಿ ತೆರಳಿದಾಗ ಕಿಡಿಗೇಡಿಗಳ ಕೃತ್ಯ ಬಯಲಾಗಿದೆ. ಇನ್ನು ಸ್ಥಳದಲ್ಲಿ ವಾಮಾಚಾರಕ್ಕೆ ಬಳಸಿದ್ದ ಬೊಂಬೆ,ಕುಂಕುಮ, ತಾಮ್ರದ ವಸ್ತುಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವಿಷಯ ತಿಳಿದು ಘಟನಾ ಸ್ಥಳಕ್ಕೆ ಕಿಬ್ಬನಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.