ತಿಪಟೂರು : ಕೊಬ್ಬರಿ ಕದ್ದ ಐನಾತಿ ಕಳ್ಳರು | ಅಂಗಡಿ ಬೀಗ ಮುರಿದು ಕಳ್ಳತನ

ಎಪಿಎಂಸಿ ಮಾರುಕಟ್ಟೆಯಲ್ಲಿ ಕ‍ಳ್ಳತನವಾದ ಕೊಬ್ಬರಿ ಅಂಗಡಿ.
ಎಪಿಎಂಸಿ ಮಾರುಕಟ್ಟೆಯಲ್ಲಿ ಕ‍ಳ್ಳತನವಾದ ಕೊಬ್ಬರಿ ಅಂಗಡಿ.
ತುಮಕೂರು

ತಿಪಟೂರು:

ಕೊಬ್ಬರಿಗೆ ಇಡೀ ಏಷ್ಯಾದಲ್ಲೇ ಪ್ರಖ್ಯಾತಿ ಆಗಿರುವ ತಿಪಟೂರಿನ ಎಪಿಎಂಸಿಯಲ್ಲಿ ಖದೀಮರು ಕೈಚಳಕ ತೋರಿದ್ದು, ಅಂಗಡಿ ಬೀಗ ಮುರಿದು ಕೊಬ್ಬರಿಯನ್ನು ಕಳ್ಳತನ ಮಾಡಿದ್ದಾರೆ. ಹೌದು ಜನ ಚಿನ್ನ, ಹಣವನ್ನು ಕದಿಯುವುದನ್ನು ನೋಡಿದ್ದೇವೆ, ಆದರೆ ಈ ಐನಾತಿ ಖದೀಮರು ಕೊಬ್ಬರಿಯನ್ನು ಕದ್ದು ಪರಾರಿಯಾಗಿದ್ದಾರೆ. ತಿಪಟೂರಿನ ಎಪಿಎಂಸಿ ಮಾರುಕಟ್ಟೆಯ ಮುಖ್ಯದ್ವಾರದ ಬೀಗ ಮುರಿದು ಒಳನುಗ್ಗಿದ ಖದೀಮರು, ಬರೋಬ್ಬರಿ 3 ಸಾವಿರದ 6 ನೂರ 35 ಕೆಜಿ ಕೊಬ್ಬರಿಯನ್ನು ಕದ್ದಿರುವ ಪ್ರಸಂಗ ಬೆಳಕಿಗೆ ಬಂದಿದೆ.

ಕೊಬ್ಬರಿ ವ್ಯಾಪಾರಿ ನಾಗರಾಜ್‌ ಎಂಬುವವರಿಗೆ ಸೇರಿದ ಅಂಗಡಿಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಇನ್ನು ಕದಿಯಲು ಬಂದ ಕಳ್ಳರು ಕಳ್ಳತನಕ್ಕೆ ಅಡ್ಡಿ ಬಂದವರನ್ನು ತಡೆಯಲು ಚಾಕು ಹಾಗೂ ಖಾರದ ಪುಡಿಯನ್ನು ತಂದಿದ್ದರು ಎನ್ನಲಾಗಿದ್ದು, ಕೊಬ್ಬರಿ ಕದ್ದ ಬಳಿಕ ಚಾಕು, ಖಾರದ ಪುಡಿಯನ್ನು ಅಂಗಡಿಯಲ್ಲಿ ಚೆಲ್ಲಿ ಖದೀಮರು ಪರಾರಿಯಾಗಿದ್ದಾರೆ. ಈ ಸಂಬಂಧ ತಿಪಟೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

 

Author:

...
Editor

ManyaSoft Admin

Ads in Post
share
No Reviews