MANDYA: ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು

ಮಂಡ್ಯ: 

ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದ ಶ್ರೀರಂಗ ಪಟ್ಟಣದಲ್ಲಿ ನಡೆದಿದೆ. ವಿಸಿ ನಾಲೆಗೆ ಹಾರಿ ಗಂಡ,  ಹೆಂಡತಿ ಮತ್ತು ಪುತ್ರಿ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶ್ರೀರಂಗಪಟ್ಟಣದ ಗಂಜಾಂ ನಿವಾಸಿಯಾದ ಮಾಸ್ತಪ್ಪ (65), ರತ್ನಮ್ಮ (45) ಮತ್ತು ಲಕ್ಷ್ಮಿ (18)  ಮೃತ ದುರ್ದೈವಿಗಳಾಗಿದ್ದಾರೆ. ಮಾಸ್ತಪ್ಪ ಆಟೋ ಚಾಲಕನಾಗಿದ್ದನು. ಮೃತರು ಸುಮಾರು ‌3 ಲಕ್ಷ ರೂ. ಸಾಲ‌ ಮಾಡಿಕೊಂಡಿದ್ದು, ಸಾಲಕೊಟ್ಟವರು ಮನೆ ಬಳಿ ಬಂದು ಗಲಾಟೆ ಮಾಡಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಾಲಗಾರರ ಕಾಟಕ್ಕೆ ಬೇಸೆತ್ತು ವಿಸಿ ನಾಲೆಗೆ ಹಾರಿ ಪತ್ನಿ ಹಾಗೂ ಪುತ್ರಿಯೊಂದಿಗೆ ಮಾಸ್ತಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇನ್ನು ಈ ಘಟನೆ  ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Author:

...
Sub Editor

ManyaSoft Admin

share
No Reviews