ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದ ವಿರಾಟ್ ಕೊಹ್ಲಿ ದಂಪತಿ

ಅಯೋಧ್ಯೆ: ಟೀಮ್ ಇಂಡಿಯಾ ಹಾಗೂ ಆರ್ ಸಿಬಿಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮ ಪತ್ನಿ, ನಟಿ ಅನುಷ್ಕಾ ಶರ್ಮಾ ಜೊತೆ ಇಂದು ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಭೇಟಿ ನೀಡಿ, ಶ್ರೀರಾಮನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕೊಹ್ಲಿ ರಾಮ ಮಂದಿರದ ದರ್ಶನದ ನಂತರ ಹನುಮಾನ್ ಗಡಿಗೂ ಭೇಟಿ ನೀಡಿ ಭಕ್ತಿಭಾವಪೂರ್ಣವಾಗಿ ಪ್ರಾರ್ಥನೆ ಸಲ್ಲಿಸಿದರು. ಸದ್ಯ ಈ ಕುರಿತಾದ ಪೋಟೋ ವೀಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

ಸದ್ಯ ಲಕ್ನೋನಲ್ಲಿ ಇರುವ ಕೊಹ್ಲಿ, ಐಪಿಎಲ್ ವೇಳಾಪಟ್ಟಿಯ ಮಧ್ಯೆ ಸಮಯವನ್ನು ಬಿಡುವು ಮಾಡಿಕೊಂಡು ಅಯೋಧ್ಯೆಗೆ ತೆರಳಿದ್ದರು. ಆರ್‌ ಸಿಬಿ ತಂಡಕ್ಕೆ ಮುಂಬರುವ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯ ಅತ್ಯಂತ ನಿರ್ಣಾಯಕವಾಗಿದ್ದು, ಈ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದರೆ, ತಂಡವು ಪ್ಲೇಆಫ್ ಪ್ರವೇಶಿಸಬಹುದಾಗಿದೆ.

Author:

...
Sushmitha N

Copy Editor

prajashakthi tv

share
No Reviews