ಮಂಗಳೂರು:
ಕರಾವಳಿಯ ಕಾರಣಿಕ ದೈವ ಕೊರಗಜ್ಜನ ಕಾಣಿಕೆ ಹುಂಡಿಯನ್ನು ಕಳ್ಳನೊಬ್ಬ ಕದ್ದು ಪರಾರಿಯಾಗಿರುವ ಘಟನೆ ಮಂಗಳೂರು ನಗರದ ಮೇರಿಹಿಲ್‌ನ ಕೊರಗಜ್ಜನ ಕಟ್ಟೆಯಲ್ಲಿ ನಡೆದಿದೆ.
ಮಂಗಳೂರಿನ ಮೆರಿಹಿಲ್ ಕೊರಗಜ್ಜನ ಕಟ್ಟೆಯಲ್ಲಿ ಭಕ್ತರು ಭಕ್ತಿಯಿಂದ ಅರ್ಪಿಸುವ ಕಾಣಿಕೆಗೆ ಇಡಲಾಗಿರುವ ಹುಂಡಿಯನ್ನು ಕಳ್ಳನೊಬ್ಬ ಕದ್ದು ಪರಾರಿಯಾಗಿದ್ದಾನೆ. ಸುತ್ತಮುತ್ತ ಯಾರೂ ಇಲ್ಲದ ಸಮಯವನ್ನು ಬಳಸಿಕೊಂಡ ಕಳ್ಳ, ಮೊದಲು ಕೊರಗಜ್ಜನಿಗೆ ಭಕ್ತಿಯಿಂದ ನಮಸ್ಕಾರ ಮಾಡಿ, ಕಟ್ಟೆಗೆ ಮೂರು ಸುತ್ತು ಹೊಡೆದ ನಂತರ ಹುಂಡಿಯನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಕಾಣಿಕೆ ಹುಂಡಿ ಕದ್ದೊಯ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.