ಇಂದು ಶ್ರೀ ರಾಮನವಮಿಯನ್ನು ರಾಜ್ಯಾದ್ಯಂತ ಶ್ರದ್ಧಾ, ಭಕ್ತಿಯಿಂದ ಅದ್ದೂರಿಯಾಗಿ ಆಚರಿಸಲಾಗಿದೆ. ಎಲ್ಲೆಲ್ಲೂ ರಾಮನ ಸ್ಮರಣೆಯಲ್ಲಿ ಭಕ್ತರು ಮುಳುಗಿದ್ದು, ರಾಮನ ಹೆಸರಲ್ಲಿ ಎಲ್ಲೆಲ್ಲೂ ಪಾನಕ, ಮಜ್ಜಿಗೆ, ಹೆಸರುಬೇಳೆಯನ್ನು ವಿತರಣೆ ಮಾಡಲಾಯಿತು. ಮಧುಗಿರಿಯಲ್ಲೂ ಎಲ್ಲೆಡೆ ರಾಮನವಮಿ ಆಚರಣೆ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಏಕಶಿಲಾ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಕೋಟೆ ಕೋದಂಡ ರಾಮನ ದೇವಸ್ಥಾನದಲ್ಲಿ ರಾಮನವಮಿ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲದೇ ಭಕ್ತರಿಗೆ ಪಾನಕ, ಮಜ್ಜಿಗೆ ವಿತರಣೆ ಮಾಡಲಾಯಿತು.
ಇತ್ತ ಚಿಕ್ಕಬಳ್ಳಾಪುರ ದಲ್ಲಿ ರಾಮನವಮಿ ಹಬ್ಬ ಹಿನ್ನಲೆ ಬೃಹತ್ ಬೈಕ್ ರ್ಯಾಲಿ ನಡೆಸಲಾಯ್ತು. ಬಿಜೆಪಿ ಮುಖಂಡ ಸಂದೀಪ್ ರೆಡ್ಡಿ ನೇತೃತ್ವದಲ್ಲಿ ನಗರದ ಸೂಲಾಲಪ್ಪನ ದಿನ್ನೆ ಆಂಜನೇಯ ದೇವಸ್ಥಾನದಿಂದ, ಅಂಬೇಡ್ಕರ್ ಭವನದ ರಸ್ತೆ, ವಾಪಸಂದ್ರ ವರೆಗೂ ಸುಮಾರು 1000 ಸಾವಿರಕ್ಕೂ ಅಧಿಕ ಬೈಕ್ ,40 ಕ್ಕೂ ಅಧಿಕ ಆಟೋಗಳೊಂದಿಗೆ ರ್ಯಾಲಿ ನಡೆಸಿ ನಂತರ ಸೂಲಾಲಪ್ಪದಿನ್ನೆ ಬಳಿ ಮುಕ್ತಾಯವಾಯಿತು. ನಂತರ ಕೆವಿ ಕ್ಯಾಂಪಸ್ ಬಳಿಯ ಗುಡ್ಡದ ಬಳಿ ಬೃಹತ್ ರಾಮಧ್ವಜ ಹಾರಾಟ ನಡೆಸಿದ್ದಾರೆ. ಇನ್ನೂ ಇದೇ ಮೊದಲ ಬಾರೀ ಇಷ್ಟೊಂದು ದೊಡ್ಡ ಧ್ವಜ ಹಾರಾಟ ಮಾಡಲಾಗಿದ್ದು ಸುಮಾರು 2 ಸಾವಿರಕ್ಕೂ ಅಧಿಕ ರಾಮ ಭಕ್ತರು ಬೃಹತ್ ರ್ಯಾಲಿಯಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದ್ದಾರೆ