ತಿಪಟೂರು:
ತುಮಕೂರಿನ ಸರ್ಕಾರಿ ಆಸ್ಪತ್ರೆಗಳ ಕರ್ಮಕಾಂಡ ಮುಗಿಯುತ್ತಲೇ ಇಲ್ಲ ಸ್ವಾಮಿ.. ಜಿಲ್ಲಾಸ್ಪತ್ರೆ ಒಂದು ರೀತಿ ಅದ್ವಾನ ಎದ್ದು ಹೋದ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಅವ್ಯವಸ್ಥೆ ಮತ್ತೊಂದು ರೀತಿಯದ್ದಾಗಿದೆ. ಇನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳ ದುಸ್ಥಿತಿ ಹೇಳತೀರದಂತಾಗಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್‌ಗಳು ರೋಗಿಗಳ ಜೀವದ ಜೊತೆ ಚೆಲ್ಲಾಟವೇ ಆಡ್ತಾ ಇದ್ದಾರೆ. ಒಂದ್ಕಡೆ ವೈದ್ಯರ ಕೊರತೆ ಇದ್ರೆ… ಮತ್ತೊಂದೆಡೆ ವೈದ್ಯರಿದ್ರು ಸರಿಯಾದ ಸಮಸ್ಯೆಯಕ್ಕೆ ಬಾರದೇ ರೋಗಿಗಳನ್ನು ಪರದಾಡುವಂತೆ ಮಾಡ್ತೀದೆ. ನಿಮ್ಮ ಪ್ರಜಾಶಕ್ತಿ ಟಿವಿ ತುಮಕೂರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ, ಅಕ್ರಮದ ಬಗ್ಗೆ ಸಾಲು ಸಾಲು ವರದಿ ಮಾಡ್ತಾ ಬಂದಿದ್ರು ಕೂಡ ವೈದ್ಯಾಧಿಕಾರಿಗಳಾಗಲಿ, ಸರ್ಕಾರವಾಗಲಿ ಎಚ್ಚೆತ್ತುಕೊಳ್ಳದೇ ಇರೋದು ದುರಂತವೇ ಸರಿ… ಇವತ್ತು ನಾವು ತಿಪಟೂರು ತಾಲೂಕಿನ ಹಾಲ್ಕುರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆಯನ್ನು ಬಟಾಬಯಲು ಮಾಡ್ತಿದ್ದೇವೆ..
ತಿಪಟೂರು ತಾಲೂಕಿನ ಹಾಲ್ಕುರಿಕೆ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ನೆಪ ಮಾತ್ರಕ್ಕೆ ಆಸ್ಪತ್ರೆಯನ್ನೇನು ಸ್ಥಾಪನೆ ಮಾಡಲಾಗಿದೆ. ಆದ್ರೆ ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡಲು ವೈದ್ಯರು ಇಲ್ಲ.. ನರ್ಸ್‌ಗಳು ಇಲ್ಲ.. ಇದ್ರಿಂದ ರೋಗಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣ ಆಗಿದೆ. ಸುತ್ತಮುತ್ತ ಗ್ರಾಮಸ್ಥರ ಆರೋಗ್ಯದ ದೃಷ್ಟಿಯಿಂದ ಹಾಲ್ಕುರಿಕೆ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ಆದ್ರೆ ರೋಗ ವಾಸಿಗೆಂದು ಬರುವ ರೋಗಿಗಳಿಗೆ ವೈದ್ಯರು ಹಾಗೂ ನರ್ಸ್‌ಗಳಿಲ್ಲದೇ ಚಿಕಿತ್ಸೆಗಾಗಿ ದೂರದ ತಿಪಟೂರು, ತುಮಕೂರು ಜಿಲ್ಲಾಸ್ಪತ್ರೆಗೆ ತೆರಳುವ ಸ್ಥಿತಿ ಇದೆ. ಒಂದ್ಕಡೆ ವೈದ್ಯರು, ಸಿಬ್ಬಂದಿಯ ಕೊರತೆ ಇದೆ.. ಮತ್ತೊಂದ್ಕಡೆ ವೈದ್ಯರು ಇದ್ರು ಕೂಡ ವಾರಕ್ಕೆ ಮೂರು ದಿನ ಬಂದ್ರೆ ಮತ್ತೆ ಮೂರು ದಿನ ಆಸ್ಪತ್ರೆ ಕಡೆ ಸುಳಿಯೋದೇ ಇಲ್ಲ ಅಂತಾ ಸ್ಥಳೀಯರು ಆರೋಪ ಮಾಡ್ತಾ ಇದ್ದಾರೆ.
ಜನ ಸೇವೆಯೇ ಜನಾರ್ಧನ ಸೇವೆ ಅಂತಾ ಹೇಳಲಾಗುತ್ತೆ.. ಆದ್ರೆ ಇಲ್ಲಿನ ಸ್ಥಿತಿ ಹೇಗಿದೆ ಅಂದ್ರೆ ಸಾವಿನ ಅಂಚಿಗೂ ಹೋಗಿದ್ರು ಕೂಡ ಅವರ ಪ್ರಾಣ ಉಳಿಸುಲು ಡಾಕ್ಟರ್ ಇಲ್ವೇ ಇಲ್ಲ.. ಹಾಲ್ಕುರಿಗೆ ಗ್ರಾಮ ವೊಂದರಲ್ಲೇ ಸುಮಾರು 2 ರಿಂದ 3 ಸಾವಿರ ಮಂದಿ ಜನರಿದ್ದಾರೆ.. ಸುತ್ತಮುತ್ತಲ ಗ್ರಾಮದ ನಿವಾಸಿಗಳು ಸೇರಿ ನಿತ್ಯ ಸರ್ಕಾರಿ ಆಸ್ಪತ್ರೆಗೆ ನೂರಾರು ಮಂದಿ ರೋಗಿಗಳು ಬರ್ತಾರೆ ಆದ್ರೆ ಆಸ್ಪತ್ರೆ ಕಟ್ಟಡ ಇದೆ ಅಷ್ಟೇ.. ವೈದ್ಯರು ಮಾತ್ರ ಇಲ್ಲ.. ಡಾಕ್ಟರ್‌ಗಳಿಗಾಗಿ ರೋಗಿಗಳು ಕಾದು ಕಾದು ಮನೆಗೆ ವಾಪಸ್ ಸ್ಥಿತಿ ಇದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ರು. ಸರ್ಕಾರಿ ಆಸ್ಪತ್ರೆಗಳು ಹೀಗೆ ಅವ್ಯವಸ್ಥೆಯಿಂದ ಕೂಡಿದ್ರೆ ಬಡ ರೋಗಿಗಳು ಎತ್ತ ಹೋಗಬೇಕು ಅನ್ನೋ ಪ್ರಶ್ನೆ ಮೂಡಿದೆ.
ಇನ್ನಾದ್ರು ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತು ವೈದ್ಯರ ಕೊರತೆ ನೀಗಿಸುವುದರ ಜೊತೆಗೆ ಇರುವ ವೈದ್ಯರು ಸರಿಯಾದ ಸಮಯಕ್ಕೆ ಬರುವಂತೆ ನೋಡಿಕೊಳ್ಳಬೇಕಿದೆ.