ರಾಜ್ಯ:
ಹಾಲು, ಮೊಸರು, ವಿದ್ಯುತ್, ಟೋಲ್ ಸೇರಿದಂತೆ ಅನೇಕ ವಸ್ತು ಹಾಗೂ ಸೇವೆಗಳ ದರ ಇಂದಿನಿಂದ ಏರಿಕೆಯಾಗಿದೆ. ರಾಜ್ಯದಲ್ಲಿ ಬೆಲೆ ಏರಿಕೆ ನಡುವೆಯೇ ಇಂದಿನಿಂದ ವಾಹನ ಸವಾರರಿಗೆ ಟೋಲ್ ದರ ಏರಿಕೆ ಬಿಸಿ ಕೂಡಾ ತಟ್ಟಲಿದೆ. ಶೇ. 5ರಷ್ಟು ಟೋಲ್ ದರ ಏರಿಕೆಯಾಗಿದೆ. ವಾಹನಗಳ ಟೋಲ್ ದರವೂ ಇಂದಿನಿಂದ ಹೆಚ್ಚಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿಯಂತೆ ಟೋಲ್ ಶುಲ್ಕ ದರ ಶೇ. 3 ರಿಂದ 5 ರಷ್ಟು ಏರಿಕೆಯಾಗಲಿದೆ. ರಾಜ್ಯದಲ್ಲಿ ಒಟ್ಟು 60ಕ್ಕೂ ಹೆಚ್ಚು ಟೋಲ್ ಗಳಿದ್ದು ದರ ಏರಿಕೆ ಬಿಸಿ ವಾಹನ ಸವಾರರಿಗೆ ಹೊರೆಯಾಗಲಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ವಾರ್ಷಿಕ ಟೋಲ್ ದರ ಏರಿಕೆಯು ಇಂದಿನಿಂದ ಅನ್ವಯವಾಗಲಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೆಯಲ್ಲೂ ಪರಿಷ್ಕೃತ ದರ ಜಾರಿ ಆಗಿದೆ. ಬೆಂಗಳೂರಿನಿಂದ ನಿಢಗಟ್ಟದವರೆಗಿನ 56ಕಿ.ಮೀ ಗೆ ಶೇ.5ರಷ್ಟು ಟೋಲ್ ದರ ಏರಿಕೆಯಾಗಿದ್ದು, ಬಿಡದಿ ಸಮೀಪದ ಶೇಷಗಿರಿಹಳ್ಳಿ ಹಾಗೂ ಕಣಮಿಣಕಿ ಟೋಲ್‌ನಲ್ಲೂ ದರ ಏರಿಕೆ ಮಾಡಲಾಗಿದೆ.