ಹುಬ್ಬ ನಕ್ಷತ್ರವು ಇಪ್ಪತ್ತೇಳು ನಕ್ಷತ್ರಗಳಲ್ಲಿ ಹನ್ನೊಂದನೆಯದು. ಇದನ್ನು ಭಗ ದೇವತೆಗೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರು ಪ್ರಿಯವಾದ ಮಾತುಗಾರರು, ಕೊಡುಗೈ ದಾನಿಗಳು, ಹೆಚ್ಚಿನ ಕಾಂತಿಯುಳ್ಳವರು ಮತ್ತು ಸಾಹಸಿಗಳಾಗಿರುತ್ತಾರೆ. ಆದರೆ ಕೆಲವೊಮ್ಮೆ ಕ್ರೂರ ಸ್ವಭಾವ ಮತ್ತು ಅತಿಯಾದ ಆಸೆಗಳಿಂದ ಬಳಲಬಹುದು. ಫಾಲ್ಗುಣ ಮಾಸ ಈ ನಕ್ಷತ್ರದಿಂದ ಪ್ರಾರಂಭವಾಗುತ್ತದೆ ಎಂಬುದು ವಿಶೇಷ.
ಇಪ್ಪತ್ತೇಳು ನಕ್ಷತ್ರಗಳಲ್ಲಿ ಇದು ಹನ್ನೊಂದನೇ ನಕ್ಷತ್ರ. ಇದರ ದೇವತೆ ಭಗ. ಅಚ್ಚ ಕನ್ನಡದಲ್ಲಿ ಇದಕ್ಕೆ ಹುಬ್ಬ ಎಂದೂ ಕರೆಯುತ್ತಾರೆ. ಇದು ಉಗ್ರ ಸ್ವಭಾವದ ನಕ್ಷತ್ರ ಎಂಬುದಾಗಿ ಹೇಳುತ್ತಾರೆ. ಎರಡು ನಕ್ಷತ್ರಗಳಿಂದ ಕೂಡಿರುವ ಇದು ಭೂಮಿಯಿಂದ ನೋಡುವಾಗ ಮಲಗುವ ಮಂಚದಂತೆ ಕಾಣಿಸುತ್ತದೆ. ಫಾಲ್ಗುಣ ಮಾಸವಾಗುವುದು ಇದೇ ನಕ್ಷತ್ರದ ಕಾರಣಕ್ಕೆ. ಸಿಂಹ ರಾಶಿಯಲ್ಲಿ ಬರುವ ಮತ್ತೊಂದು ಪೂರ್ಣ ನಕ್ಷತ್ರವಿದಾಗಿದೆ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಮ ಮತ್ತು ಟ ಅಕ್ಷರದಿಂದ ನಕ್ಷತ್ರನಾಮವನ್ನು ಇಡುತ್ತಾರೆ.
1.ಪ್ರಿಯವಾದ ಮಾತುಗಾರ
2.ಇವರು ಇನ್ನೊಬ್ಬರಿಗೆ ಪ್ರಿಯವಾಗುವಂತೆ ಮಾತನಾಡುತ್ತಾರೆ.
3.ಮೈಕಾಂತಿ ಹೆಚ್ಚು
4.ಇವರ ಚರ್ಮದ ಕಾಂತಿ ಆಕರ್ಷಕವಾಗಿ ಇರುತ್ತದೆ. ಹೊಳಪಿನ ಶರೀರ ಇವರದ್ದು.
5.ತಿರುಗಾಟ ಅಧಿಕ
6.ಕುಳಿತಲ್ಲಿ ಕುಳಿತುಕೊಳ್ಳುವ ಸ್ವಭಾವ ಇರದು. ಕ್ರಿಯಾಶೀಲರಾಗಿ ಓಡಾಟ ಮಾಡುತ್ತಲೇ ಇರಬೇಕು.
7.ಹೆಚ್ಚು ಸಂಗಾತಿ
8.ಜೀವನದಲ್ಲಿ ಹೆಚ್ಚು ಸಂಗಾತಿಗಳು ಬರಬಹುದು. ಪತ್ನಿಯನ್ನೋ ಪತಿಯನ್ನೋ ಕಲಹಗಳಿಂದ ಪ್ರೀತಿಯಿಂದ ಮರಣದಿಂದ ಹೀಗೆ ನಾನಾಪ್ರಕಾರಗಳಿಂದ ಒಂದಕ್ಕಿಂತ ಹೆಚ್ಚು ಪಡೆಯುವರು.
9.ಆಸೆ ಅಧಿಕ
10.ಅಸೆ ಅತಿಯಾಗಿರುವ ನಕ್ಷತ್ರ ಇದು. ಕಾಮವನ್ನು ಪೂರೈಸಿಕೊಳ್ಳದೇ ದುಃಖಿಸುವ ಸಂದರ್ಭವೂ ಬರಲಿದೆ.
11.ಶೂರ
12.ಪರಾಕ್ರಮವನ್ನು ತೋರಿಸಲು ಹಿಂಜರಿಯುವುದಿಲ್ಲ. ಸಿಂಹದಂತಹ ಶೌರ್ಯ ಇವರಲ್ಲಿ. ಯಾವುದನ್ನೂ ಮಾಡಬಲ್ಲ ಸಾಮರ್ಥ್ಯ ಇವರಲ್ಲಿರುವುದು.