ಕಲಬುರಗಿ :
ಇಂದು ಬೆಳ್ಳಂಬೆಳಿಗ್ಗೆ ರೌಡಿಶೀಟರ್ ನನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿರುವಂತಹ ಘಟನೆ ಕಲಬುರಗಿಯ ಕಾಕಡೆ ಚೌಕ್ ಸಮೀಪದ ಲಂಗರ್ ಹನುಮಾನ್ ದೇವಸ್ಥಾನದ ಬಳಿ ನಡೆದಿದೆ.
ಫಿಲ್ಟರ್ ಬೆಡ್ ಪ್ರದೇಶದ ಭವಾನಿನಗರದ ನಿವಾಸಿ ರೌಡಿಶೀಟರ್ ವೀರೇಶ್ ಅಲಿಯಾಸ್ ಸಾರಥಿ ಬಿರಾದರ್ (30) ಹತ್ಯೆಯಾದ ಮೃತ ದುರ್ದೈವಿಯಾಗಿದ್ದಾನೆ. ಹನುಮಾನ್ ದೇವಸ್ಥಾನದ ಬಳಿ ದುಷ್ಕರ್ಮಿಗಳು ವೀರೇಶ್ ನನ್ನು ಕರೆಸಿಕೊಂಡು ಕೊಲೆಮಾಡಿದ್ದಾರೆ ಎನ್ನಲಾಗಿದೆ. ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್. ಡಿ ಮತ್ತು ಡಿಸಿಪಿ ಕನಿಕಾ ಸಿಕ್ರಿವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.