ಉಚಿತ ಭಾಗ್ಯಗಳ ಕೊಟ್ಟ ಕಾಂಗ್ರೆಸ್ ರಾಜ್ಯದ ಜನರಿಗೆ ಶಾಕ್ ಮೇಲೆ ಶಾಕ್ ಕೊಡ್ತಾನೆ ಇದ್ದು, ಇದೀಗ ಮತ್ತೊಂದು ಶಾಕ್ ನೀಡಿದೆ. ಹೌದು ಈವರೆಗೂ ಬಸ್ ದರ, ಮೆಟ್ರೋ ದರ, ಹಾಲಿನ ದರ ಏರಿಕೆಯಿಂದ ಬೇಸತ್ತಿದ್ದ ಜನರಿಗೆ ಇದೀಗ ಕರೆಂಟ್ ಶಾಕ್ನ ಭೀತಿ ಶುರುವಾಗಿದೆ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ದರ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಇದ್ರಿಂದ ಸತತ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
ಅಬ್ಬಾ ಉಚಿತ ಭಾಗ್ಯ ಸಿಕ್ಕಿದೆ ಎಂದು ಖುಷಿಪಡುತ್ತಿದ್ದ ಜನರಿಗೆ ಬೆಲೆ ಏರಿಕೆಯ ಶಾಕ್ನಿಂದ ಜನರು ಕಂಗೆಟ್ಟಿದ್ದಾರೆ. ವಿದ್ಯುತ್ ದ ಪ್ರತಿ ಯೂನಿಟ್ಗೆ 36 ಪೈಸೆ ಹೆಚ್ಚಳ ಮಾಡಿ KERC ಇಲಾಖೆ ಆದೇಶ ಹೊರಡಿಸಿದ್ದು, ಪರಿಷ್ಕೃತ ದರ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದ್ದು, ಯುಗಾದಿ ಹಬ್ಬಕ್ಕೆ ಸರ್ಕಾರ ವಿದ್ಯುತ್ ಏರಿಕೆಯ ಗಿಫ್ಟ್ ನೀಡಿದೆ. KPTCL ಹಾಗೂ ಎಸ್ಕಾಂ ನೌಕರರ ಪಿಂಚಣಿ ಹಾಗೂ ಗ್ರಾಚ್ಯುಟಿ ಪಾವತಿಸಲು ಹಾಗೂ ಉಚಿತ ವಿದ್ಯುತ್ ಯೋಜನೆಗಳ ವೆಚ್ಚ ಭರಿಸಲು ವಿದ್ಯುತ್ ದರ ಏರಿಕೆ ಮಾಡಲಾಗಿದೆ ಎಂದು ಕೆಇಆರ್ಸಿ ತಿಳಿಸಿದೆ. ಅಂದ್ರೆ ಗ್ರಾಹಕರ ಮಾಸಿಕ ಬಿಲ್ನಲ್ಲಿ ಉಲ್ಲೇಖ ಮಾಡಿ ಹೆಚ್ಚುವರಿ ದರ ವಸೂಲಿ ಮಾಡಲಾಗುತ್ತದೆ. ಮುಂದಿನ ಮೂರು ಆರ್ಥಿಕ ವರ್ಷಗಳಿಗೆ ಅನ್ವಯ ಆಗುವಂತೆ ಆದೇಶ ಹೊರಡಿಸಿದ್ದು, ಎಷ್ಟು ವಿದ್ಯುತ್ ದರ ಏರಿಕೆ ಆಗಿದೆ ಎಂದು ನೋಡುವಾದಾದ್ರೆ,
ಯಾವ ಯಾವ ವರ್ಷ ಎಷ್ಟೆಷ್ಟು ವಿದ್ಯುತ್ ದರ ಏರಿಕೆ?
- 2025-26 ರಲ್ಲಿ 36 ಪೈಸೆ
- 2026-27 ರಲ್ಲಿ 35 ಪೈಸೆ
- 2027-28ರಲ್ಲಿ 34 ಪೈಸೆ
ಇನ್ನು ವಿದ್ಯುತ್ ದರ ಹೆಚ್ಚಳದಿಂದ ಸಾಮಾನ್ಯ ಜನರಿಗೆ ತೊಂದ್ರೆ ಆಗೋದಿಲ್ಲ.. ಗೃಹ ಜ್ಯೋತಿ ಯೋಜನೆ ನಷ್ಟದಿಂದ ವಿದ್ಯುತ್ ದರ ಏರಿಕೆ ಮಾಡಲಾಗಿಲ್ಲ. ಸರ್ಕಾರ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಟ್ಟಿದ್ದೇವೆ, 200 ಯೂನಿಟ್ ಮೇಲೆ ಬಳಸಿದವರಿಗೆ ದರ ಏರಿಕೆ ಅನ್ವಯ ಆಗಲಿದೆ ಎಂದು ಕೈ ಸರ್ಕಾರ ತಿಳಿಸಿದೆ. ಆದ್ರೆ ಉಚಿತ ಭಾಗ್ಯಗಳ ಫಲದಿಂದ ದರ ಏರಿಕೆ ಮಾಡ್ತಿದೆ ಎಂದು ಪ್ರತಿಪಕ್ಷಗಳು ಆರೋಪ ಮಾಡ್ತಾ ಇದೆ.
ಅದೇನೆ ಇರಲಿ, ಒಂದ್ಕಡೆ ಉಚಿತ ಭಾಗ್ಯಗಳ ಕೊಟ್ಟ ಕಾಂಗ್ರೆಸ್ ಸರ್ಕಾರ ಒಂದು ಕೈ ಯಿಂದ ಕೊಟ್ಟು ಮತ್ತೊಂದು ಕೈಯಿಂದ ಕಸಿದುಕೊಳ್ತಾ ಇದೆ. ಯುಗಾದಿ ಸಂಭ್ರದಲ್ಲಿದ್ದ ಜನರಿಗೆ ಸರ್ಕಾರ ಕರೆಂಟ್ ಶಾಕ್ ಕೊಟ್ಟಿದ್ದು, ಎಷ್ಟೆಷ್ಟು ಏರಿಕೆ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.