ಉತ್ತರಾಖಂಡ :
ಉತ್ತರಾಖಂಡದ ಪವಿತ್ರ ಚಾರ್‌ಧಾಮ್ ಯಾತ್ರೆಯ ಭಾಗವಾಗಿ, ಇಂದು ಕೇದಾರನಾಥ ಧಾಮದ ಬಾಗಿಲುಗಳನ್ನು ತೆರಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು `ಹರ್ ಹರ್ ಮಹಾದೇವ’ ಜಯಘೋಷ ಕೂಗಿದರು.
ಕೇದಾರನಾಥ ದೇವಾಲಯವನ್ನು ಈ ಬಾರಿ 108 ಕ್ವಿಂಟಾಲ್ ವಿವಿಧ ರೀತಿಯ ಹೂಗಳಿಂದ ಅಲಂಕರಿಸಲಾಗಿದೆ. ನೇಪಾಳ, ಥೈಲ್ಯಾಂಡ್ ಮತ್ತು ಶ್ರೀಲಂಕಾದಿಂದ ತರಲಾಗಿದ್ದ ಗುಲಾಬಿ, ಮಲ್ಲಿಗೆ ಸೇರಿದಂತೆ 54 ಬಗೆಯ ಹೂಗಳಿಂದ ದೇವಾಲಯದ ಶೃಂಗರಿಸಲಾಗಿದೆ.
ಬಾಗಿಲು ತೆರೆಯುತ್ತಿದ್ದಂತೆ ಭಕ್ತರು ತಮ್ಮ ಶ್ರದ್ಧೆಯನ್ನು ಜಯಕಾರಗಳ ಮೂಲಕ ವ್ಯಕ್ತಪಡಿಸಿದರು. ದೇವಾಲಯದ ಸುತ್ತಲೂ ಭಕ್ತರ ದಂಡು ಜಮಾಯಿಸಿತು. ಕೇದಾರನಾಥ ಧಾಮದಲ್ಲಿ ಈ ಬಾರಿ ಭಕ್ತರಿಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಭದ್ರತೆ, ಆರೋಗ್ಯ ಸೇವೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.