ದೇಶ:
ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿ 28 ಜನರ ಸಾವಿಗೆ ಕಾರವಾಗಿದ್ರು ಹಿನ್ನಲೆ ಪಾಕಿಸ್ತಾನ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಭಾರತ ಸರ್ಕಾರ ಮುಂದಾಗಿದೆ. ಈ ಸಂಬಂಧ ಮೋದಿ ನೇತೃತ್ವದಲ್ಲಿ ಕ್ಯಾಬಿನೆಟ್ ಮೀಟಿಂಗ್ ನಡೆಸಲಾಯಿತು.
ಇನ್ನು ಈ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಇಂಡಸ್ ಜಲ ಒಪ್ಪಂದವನ್ನು ಅಮಾನತುಪಡಿಸಿರುವುದಾಗಿ ಘೋಷಿಸಿತ್ತು. ಜತೆಗೆ ಅಟಾರಿ ಗಡಿಯಲ್ಲಿರುವ ಸಮಗ್ರ ಚೆಕ್ ಪೋಸ್ಟ್ ಮುಚ್ಚಲು ಮತ್ತು ಹೈಕಮಿಷನ್ ಗಳ ಒಟ್ಟಾರೆ ಬಲವನ್ನು ಕಡಿತಗೊಳಿಸಲು ನಿರ್ಧರಿಸಿದೆ.
1960ರ ಸಿಂಧೂ ಜಲ ಒಪ್ಪಂದವನ್ನು ಅಮಾನತು ಮಾಡಲಾಗುತ್ತಿದೆ. ಅಟಾರಿ ಗಡಿಯ ಸಮಗ್ರ ಚೆಕ್ ಪೋಸ್ಟ್ ಮುಚ್ಚಲಾಗುತ್ತಿದೆ. ಅಧಿಕೃತ ದಾಖಲೆಗಳೊಂದಿಗೆ ಗಡಿ ದಾಟಿ ಬಂದಿರುವವರು 2025ರ ಮೇ 1ರ ಒಳಗಾಗಿ ವಾಪಸ್ಸಾಗಬೇಕು. ಸಾರ್ಕ್ ವೀಸಾ ವಿನಾಯ್ತಿ ಯೋಜನೆಯಡಿ ಭಾರತ ಪ್ರವಾಸ ಕೈಗೊಳ್ಳಲು ಪಾಕಿಸ್ತಾನಿ ಪ್ರಜೆಗಳಿಗೆ ನೀಡಿದ್ದ ಅನುಮತಿ ರದ್ದುಪಡಿಲಾಗಿದೆ. ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ನ ರಕ್ಷಣಾ/ಸೇನಾ, ನೌಕಾ ಮತ್ತು ವಾಯು ಸಲಹೆಗಾರರ ಹುದ್ದೆಗಳಿಗೆ ಅನುಮತಿ ರದ್ದುಪಡಿಸಲಾಗುವುದು. ಹೈಕಮಿಷನ್ ನ ಒಟ್ಟಾರೆ ಬಲವನ್ನು ಮೇ 1ರಿಂದ ಜಾರಿಯಾಗುವಂತೆ 55 ರಿಂದ 30ಕ್ಕೆ ಇಳಿಸಲಾಗಿದೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಈ ಕ್ರಮಗಳು ಯಾವ ರೀತಿಯಲ್ಲಿ ಪರಿಣಾಮ ಬೀರಲಿವೆ ಎಂದು ಕಾದು ನೋಡಬೇಕಿದೆ.