ಶಿರಾ:
ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ 28 ಜನ ಪ್ರವಾಸಿಗರನ್ನ ಹತ್ಯೆ ಮಾಡಿರುವ ಉಗ್ರರ ದಾಳಿಯನ್ನು ಖಂಡಿಸಿ ಶಿರಾ ನಗರದಲ್ಲಿ ಮೆಣದಬತ್ತಿ ಹಿಡಿದು ಪ್ರತಿಭಟನೆ ನಡೆಸಿ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಈ ಸಂದರ್ಭದಲ್ಲಿ ದೆಹಲಿಯ ವಿಶೇಷ ಪ್ರತಿನಿಧಿ, ಶಿರಾ ಶಾಸಕ ಡಾ..ಟಿ.ಬಿ.ಜಯಚಂದ್ರ ಮಾತನಾಡಿ, ಭಯೋತ್ಪಾದನೆಯನ್ನು ಬುಡಮೇಲು ಮಾಡಲು ಶೀಘ್ರವಾಗಿ ಕ್ರಮಕೈಗೊಳ್ಳಬೇಕು. ಇಂಥ ಘಟನೆಗಳು ಮತ್ತೆಂದೂ ಜರುಗಬಾರದು. ಜಗತ್ತಿನಲ್ಲಿ ಭಯೋತ್ಪಾದನೆ ತೊಲಗಬೇಕು. ಮುಗ್ದ ಜನರನ್ನು ಹತ್ಯೆ ಮಾಡುವುದಕ್ಕೆ ಯಾವುದೇ ರೀತಿಯ ಸಮರ್ಥನೆ ಇಲ್ಲ. ಇದೊಂದು ಕ್ರೂರ ದಾಳಿಯಾಗಿದೆ ಎಂದು ಉಗ್ರರ ಅಟ್ಟಹಾಸದ ವಿರುದ್ಧ ಕಿಡಿಕಾರಿದ್ರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್‌ನ ಅದ್ಯಕ್ಷ ಮಣಿಕಂಠ, ನಗರ ಅದ್ಯಕ್ಷ ಅಂಜನ್ ಕುಮಾರ್ ಸೇರಿ ಇತರರು ಹಾಜರಿದ್ದರು.