MOVIE : ಚಿತ್ರೀಕರಣದ ವೇಳೆ ಭೀಕರ ಅವಘಡ

MOVIE NEWS : ತೆಲುಗು ನಟ ನಿಖಿಲ್ ಸಿದ್ದಾರ್ಥ್ ಅಭಿನಯಿಸುತ್ತಿರುವ ‘ದಿ ಇಂಡಿಯನ್ ಹೌಸ್’ ಸಿನಿಮಾದ ಚಿತ್ರೀಕರಣ ಸೆಟ್‌ನಲ್ಲಿ ಭೀಕರ ಅವಘಡ ಸಂಭವಿಸಿದ್ದು, ಕೆಲವರು ಗಾಯಗೊಂಡಿದ್ದಾರೆ. ರಾಮ್ ಚರಣ್ ಸಹ ನಿರ್ಮಾಪಕರಾಗಿರುವ ಈ ಸಿನಿಮಾದ ಶೂಟಿಂಗ್ ಶಂಶಾಬಾದ್‌ನಲ್ಲಿ ನಡೆಯುತ್ತಿದೆ.

ಚಿತ್ರದ ಒಂದು ದೃಶ್ಯಕ್ಕಾಗಿ ನಿರ್ಮಾಪಕರು ದೊಡ್ಡ ಟ್ಯಾಂಕರ್‌ನ್ನು ಸೆಟ್‌ನಲ್ಲಿ ನಿರ್ಮಿಸಿದ್ದರು. ಆದರೆ, ಈ ಟ್ಯಾಂಕರ್‌ ಏಕಾಏಕಿ ಒಡೆದು ಬಿದ್ದು, ಸೆಟ್‌ಗೆ ಹಾನಿಯಾಗಿದೆ. ಈ ವೇಳೆ ಸಹಾಯಕ ಕ್ಯಾಮೆರಾಮನ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಅವರೊಂದಿಗೆ ಇನ್ನೂ ಕೆಲವರು ಗಾಯಗೊಂಡಿರುವ ವರದಿ ಬಂದಿದೆ. ನಟ ನಿಖಿಲ್ ಸಿದ್ದಾರ್ಥ್ ಈ ವೇಳೆ ಸೆಟ್ನಲ್ಲೇ ಇದ್ದರೂ ಅವರು ಯಾವುದೇ ಗಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ದೃಶ್ಯಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

Author:

...
Keerthana J

Copy Editor

prajashakthi tv

share
No Reviews