MOVIE : ಯಶ್‌ ತಾಯಿ ಬಂಡವಾಳ ಹೂಡಿರೋ ಕೊತ್ತಲವಾಡಿ ಸಿನಿಮಾ ಟೀಸರ್ ಬಿಡುಗಡೆ

SANDLEWOOD : ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅರುಣ್ಕುಮಾರ್ ಹೊಸ ಪ್ರೊಡಕ್ಷನ್ ಹೌಸ್ ಆರಂಭಿಸಿ ಮೊದಲ ಹಂತದಲ್ಲೇ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಕೊತ್ತಲವಾಡಿ' ಸಿನಿಮಾದ ಟೈಟಲ್ ಅನೌನ್ಸ್ ಆದ ಕೆಲ ದಿನಗಳಲ್ಲೇ ಟೀಸರ್ ರಿಲೀಸ್ ಆಗಿದ್ದು, ಸಿನಿಪ್ರೇಮಿಗಳಲ್ಲಿ ದೊಡ್ಡ ಮಟ್ಟದ ಕುತೂಹಲ ಮೂಡಿಸಿದೆ.

ಪೃಥ್ವಿ ಅಂಬಾರ್ ಕೊತ್ತಲವಾಡಿ  ಸಿನಿಮಾದಲ್ಲಿ ಈಗಾಗಲೇ ನೋಡದ ರೀತಿಯ ಹಳ್ಳಿ ಯುವಕನಾಗಿ ಮಿಂಚಿದ್ದು, ಆಕ್ಷನ್‌ನ ಹೊಸ ಶೈಲಿ ಪರಿಚಯಿಸಿದ್ದಾರೆ. ಮಂಡ್ಯ ಹೈದನ ಪಾತ್ರದಲ್ಲಿ ಅವರು ನಟಿಸುತ್ತಿರುವುದು  ವಿಶೇಷವಾಗಿದೆ. ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡಿರುವ ಶ್ರೀರಾಜ್, ಈ ಹಿಂದೆ ‘ಲಾಂಗ್ ಡ್ರೈವ್’ ಸಿನಿಮಾದ ಮೂಲಕ ನಿರ್ದೇಶನದ ಜಗತ್ತಿಗೆ ಕಾಲಿಟ್ಟಿದ್ದರು.

ಟೀಸರ್‌ನಲ್ಲಿ ರಾಜೇಶ್ ನಟರಂಗ ಪೊಲೀಸ್ ಅಧಿಕಾರಿಯಾಗಿ ಬಣ್ಣ ಹಚ್ಚಿದರೆ, ಖಡಕ್ ವಿಲನ್ ಆಗಿ ಗೋಪಾಲ್ ದೇಶಪಾಂಡೆ ತಾವು ವಿಶೇಷವಾಗಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ನಾಯಕಿಯಾಗಿ ಕಾವ್ಯ ಶೈವ ಲವ್ ಸ್ಟೋರಿ ಝಲಕ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ವಿಕಾಸ್ ವಸಿಷ್ಟ ಅವರ ಹಿನ್ನೆಲೆ ಸಂಗೀತ ಟೀಸರ್‌ಗೆ ಹೆಚ್ಚುವರಿ ಮೆರುಗು ನೀಡಿದ್ದು, ಕಾರ್ತಿಕ್ ಎಸ್ ಅವರ ಛಾಯಾಗ್ರಹಣ ದೃಶ್ಯಾನ್ವೇಷಣೆಗೆ ಹೊಸ ಆಯಾಮ ನೀಡಿದೆ. ರಘು ನಿಡುವಳ್ಳಿ ಅವರ ಸಂಭಾಷಣೆ ಕೂಡ ಪ್ರಭಾವ ಬೀರುತ್ತದೆ.

ಇನ್ನು ಚಾಮರಾಜನಗರ ಜಿಲ್ಲೆಯ ಸಣ್ಣ ಹಳ್ಳಿಯ ಪಾತ್ರದಲ್ಲಿ ಸಾಗುವ ‘ಕೊತ್ತಲವಾಡಿ’ ಹಳ್ಳಿ ಜೀವನದ ನೈಸರ್ಗಿಕತೆಯೊಂದಿಗೆ ಆಕ್ಷನ್ ನಂಟು ಮಾಡುವ ಪ್ರಾಯೋಗಿಕ ಪ್ರಯತ್ನ. ಪ್ರೇಕ್ಷಕರ ಗಮನ ಸೆಳೆಯುವಂಥ ದೃಶ್ಯಗಳು, ಜನಬುಡಕಟ್ಟಿನ ಕಥಾ ಶೈಲಿ ಈ ಸಿನಿಮಾದ ಪ್ರಮುಖ ಆಕರ್ಷಣೆಯಾಗಿವೆ.

ಇನ್ನುಬ 'ಕೊತ್ತಲವಾಡಿ' ಟೀಸರ್ ನೋಡಿದವರಿಗೆ ಸಿನ್ಮಾವನ್ನು ನಿರೀಕ್ಷಿಸುವ ಕುತೂಹಲ ಹೆಚ್ಚಾಗಿದೆ. ಹಳ್ಳಿ ಸ್ಟೈಲ್ ಆಕ್ಷನ್ ಸಿನಿಮಾ ನೋಡೋಣ ಅಂತ ಕಾಯುತ್ತಿರುವ ಪ್ರೇಕ್ಷಕರಿಗೆ ಇದು ಒಳ್ಳೆಯ ಸುದ್ದಿಯಾಗಿದೆ.

Author:

...
Keerthana J

Copy Editor

prajashakthi tv

share
No Reviews