ಶಿಕ್ಷಕ ಸಂಜೀವ್ ಮೂರ್ತಿತುಮಕೂರು
ಮಧುಗಿರಿ ತಾಲ್ಲೂಕಿನ ದೊಡ್ಡದಾಳವಾಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಸಂಜೀವಮೂರ್ತಿ ಮಕ್ಕಳ ಜತೆ ಅಸಭ್ಯ ವರ್ತನೆ ಹಾಗೂ ಶಾಲೆಯ ಹೆಣ್ಣು ಮಕ್ಕಳನ್ನು ಮೈ ಮುಟ್ಟಿ ಮಾತನಾಡುತ್ತಿದ್ದ ಎಂಬ ಆರೋಪದಡಿ ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸರ್ಕಾರಿ ಶಾಲೆಯ ಸಹ ಶಿಕ್ಷಕನಾಗಿದ್ದ ಎ.ಆರ್ ಸಂಜೀವ್ ಮೂರ್ತಿ ವಿರುದ್ದ ಮಕ್ಕಳ ಸಹಾಯವಾಣಿ 1098 ಗೆ ಕರೆ ಬಂದಿತ್ತು. ಈ ಹಿನ್ನೆಲೆ ಶಾಲೆಗೆ ಭೇಟಿ ನೀಡಿ ಸಮಾಲೋಚಿಸಿದಾಗ 6 ಮತ್ತು 7 ನೇ ತರಗತಿಯ ವಿಧ್ಯಾರ್ಥಿನಿಯರನ್ನು ಗಂಡು ಮಕ್ಕಳು ಇಲ್ಲದ ವೇಳೆ ಮೈ ಮುಟ್ಟಿ, ರಟ್ಟೆ ಒತ್ತುವುದು, ಕೆನ್ನೆ ಚಿವುಟುವುದು, ಬೆನ್ನು ಸವರುವುದು ಹಾಗೂ ಶೌಚಾಲಯಕ್ಕೆ ಹೋಗುವಾಗ ಅಸಭ್ಯವಾಗಿ ವರ್ತಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದ ಎಂದು ತಿಳಿದುಬಂದಿದೆ. ಆತನ ವರ್ತನೆ ಬಗ್ಗೆ ಶಾಲಾ ಮುಖ್ಯ ಶಿಕ್ಷಕ ಹನುಮಯ್ಯ, ಬಿಇಒ,ಇಸಿಒ, ಸಿಆರ್ ಪಿ ಅವರಿಗೆ ತಿಳಿಸಿ ಮೇಲಾಧಿಕಾರಿಗಳ ಸೂಚನೆಯಂತೆ ಕೊಡಿಗೇನಹಳ್ಳಿ ಪೋಲಿಸ್ ಠಾಣೆಗೆ ದೂರು ನೀಡಲಾಗಿತ್ತು.
ದೂರಿನ ಮೇರೆಗೆ ಪಿಎಸ್ ಐ ಶ್ರೀನಿವಾಸ್ ಪ್ರಸಾದ್ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹೀಗಾಗಿ ಶಿಕ್ಷಕನ ವೇಷದಲ್ಲಿದ್ದ ಕಾಮುಕ ಇದೀಗ ಜೈಲು ಪಾಲಾಗಿದ್ದಾರೆ.