CHAMARAJANAGARA: ಟಾಟಾಏಸ್-ಬಸ್‌ ನಡುವೆ ಭೀಕರ ಅಫಘಾತ | ಇಬ್ಬರು ಸಾವು

ಚಾಮರಾಜನಗರ:

ಕೆಎಸ್‌ಆರ್‌ಟಿಸಿ ಬಸ್ ಹಾಗೂ ಟಾಟಾ ಏಸ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರದಲ್ಲಿ ನಡೆದಿದೆ. ಕೊಳ್ಳೇಗಾಲ ತಾಲೂಕಿನ ಬಾಣೂರು ಗ್ರಾಮದ ರಾಜಮ್ಮ (50), ಶೃತಿ (28) ಮೃತ ದುರ್ದೈವಿಗಳಾಗಿದ್ದಾರೆ.  

ಕೊಳ್ಳೇಗಾಲದಲ್ಲಿ ಸಂಬಂಧಿ ಆರಾದನೆಗೆ ಆಗಮಿಸಿ ಬಂದು ವಾಪಾಸ್ ಆಗುವಾಗ ಟಾಟಾಏಸ್‌ನಲ್ಲಿ ತೆರಳತ್ತಿದ್ದ ವೇಳೆ ಸಾರಿಗೆ ಬಸ್‌ಗೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಈ ಅವಘಡ ಸಂಭವಿಸಿದೆ.

ಇನ್ನು  ಈ  ಘಟನೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು,  ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಟಾಟಾಏಸ್‌ ನಲ್ಲಿ 17 ಮಂದಿಯಿದ್ದರು. ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಉಳಿದ 15ಮಂದಿ ಗಾಯಾಳುಗಳಿಗೆ ಆಸ್ಪತ್ರಗೆ ದಾಖಲಿಸಲಾಗಿದೆ.

 

Author:

...
Sub Editor

ManyaSoft Admin

share
No Reviews