CRICKET : ವಿರಾಟ್‌ ಕೊಹ್ಲಿಗೆ ಭಾರತ ರತ್ನ ನೀಡಬೇಕು ಎಂದ ಸುರೇಶ್‌ ರೈನಾ

CRICKET : ಆಧುನಿಕ ಚೇಸ್ ಮಾಸ್ಟರ್ ಎಂದೇ ಕರೆಯಲ್ಪಡುವ ಕಿಂಗ್ ಕೊಹ್ಲಿ, ಟಸ್ಟ್‌ ಕ್ರಿಕೆಟ್‌ನಲ್ಲಿ 123 ಟೆಸ್ಟ್ ಪಂದ್ಯಗಳಲ್ಲಿ 46.85 ಸರಾಸರಿಯಲ್ಲಿ 9,230 ರನ್ ಗಳಿಸಿ, 30 ಶತಕ, 31 ಅರ್ಧಶತಕ ಹಾಗೂ 7 ದ್ವಿಶತಕಗಳ ಮೂಲಕ ಭಾರತೀಯ ಕ್ರಿಕೆಟ್ ನ ಒಳಿತಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ.

ಕೊಹ್ಲಿಯ ನಿವೃತ್ತಿ ಅಭಿಮಾನಿಗಳ ಮನದಲ್ಲಿ ಭಾವುಕತೆ ಮೂಡಿಸಿದೆ.ಅವರು ಕ್ರಿಕೆಟ್ ಗೆ ನೀಡಿದ ಸೇವೆಯನ್ನು ಪರಿಗಣಿಸಿ, ವಿರಾಟ್ ಗೆ ಭಾರತ ರತ್ನ ನೀಡಬೇಕೆಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

ಸುರೇಶ್ ರೈನಾ ಅವರೂ ಕೂಡ ಭಾರತ ರತ್ನ ಪ್ರಶಸ್ತಿಗೆ ಕೊಹ್ಲಿಯನ್ನು ಶಿಫಾರಸು ಮಾಡಿದ್ದಾರೆ. ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಒತ್ತಾಯಿಸಿದ್ದಾರೆ. ಐಪಿಎಲ್ ವೀಕ್ಷಣಾ ವಿವರಣೆ ವೇಳೆ ಸುರೇಶ್ ರೈನಾ, ಕೊಹ್ಲಿಗೆ ಭಾರತ ರತ್ನ ನೀಡಬೇಕೆಂದು ಹೇಳಿದ್ದಾರೆ. ಕೊಹ್ಲಿ ಭಾರತೀಯ ಕ್ರಿಕೆಟ್ ಅನ್ನು ಉತ್ತುಂಗಕ್ಕೇರಿಸಿದ್ದಾರೆ. ವಿರಾಟ್ ಕೊಹ್ಲಿಗೆ ಭಾರತ ರತ್ನ ನೀಡಬೇಕೆಂದು ರೈನಾ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ವಿರಾಟ್ ಕೊಹ್ಲಿ ಅವರ ಉತ್ಸಾಹ ಪ್ರೇರಣಾದಾಯಕ ಎಂದಿದ್ದಾರೆ.

ಇನ್ನು 2014 ರಲ್ಲಿ ಸಚಿನ್ ತೆಂಡೂಲ್ಕರ್ ಭಾರತ ರತ್ನ ಪ್ರಶಸ್ತಿ ಸ್ವೀಕರಿಸಿದ ಏಕೈಕ ಕ್ರಿಕೆಟಿಗರಾಗಿದ್ದಾರೆ. ಈಗ ಅವರ ನಂತರ ಕೊಹ್ಲಿಗೆ ಈ ಗೌರವ ನೀಡಬೇಕೆಂದು ಅಭಿಮಾನಿಗಳು ಹಾಗೂ ಕ್ರಿಕೆಟ್ ತಜ್ಞರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

 

Author:

...
Keerthana J

Copy Editor

prajashakthi tv

share
No Reviews