ಸಿನಿಮಾ : ಮೊಮ್ಮಗನಿಗೆ ವಿಶ್ ಮಾಡಿದ ಸೂಪರ್ ಸ್ಟಾರ್ ರಜನಿಕಾಂತ್

ಸಿನಿಮಾ : ಸೂಪರ್ ಸ್ಟಾರ್ ರಜನಿಕಾಂತ್ ಮೊಮ್ಮಗ ಹಾಗೂ ನಟ ಧನುಷ್ ಹಿರಿಯ ಪುತ್ರ ಯಾತ್ರಾ ತಮ್ಮ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಚೆನ್ನೈನ ಕಾಲೇಜೊಂದರಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ, ಧನುಷ್ ಹಾಗೂ ಅವರ ಮಾಜಿ ಪತ್ನಿ ಐಶ್ವರ್ಯಾ ರಜನಿಕಾಂತ್ ಇಬ್ಬರೂ ತಮ್ಮ ಮಗನ ಗೆಲುವಿನಲ್ಲಿ ಭಾಗಿಯಾಗಿ, ಆ ಕ್ಷಣವನ್ನು ಉತ್ಸಾಹದಿಂದ ಆಚರಿಸಿದರು.

ಯಾತ್ರಾ ಪದವಿ ಪಡೆದ ಕ್ಷಣದಲ್ಲಿ ತಾಯಿ-ತಂದೆ ಇಬ್ಬರನ್ನು ತಬ್ಬಿಕೊಂಡು ಖುಷಿ ವ್ಯಕ್ತಪಡಿಸಿದ ದೃಶ್ಯ ಎಲ್ಲರ ಮನ ಗೆದ್ದಿತು. ಈ ಅಪರೂಪದ ಕ್ಷಣದ ಫೋಟೋಗಳನ್ನು ರಜನಿಕಾಂತ್ ಹಾಗೂ ಧನುಷ್ ಇಬ್ಬರೂ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದು, ನೂರಾರು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಧನುಷ್ ತಮ್ಮ ಪೋಸ್ಟ್‌ನಲ್ಲಿ, "Proud parents. Yatra, love you." ಎಂದು ಬರೆದು, ಮಗನ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಪದವಿ ಸಮಾರಂಭದಲ್ಲಿ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಅವರು ವಿಚ್ಛೇದನದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ಗಮನಾರ್ಹ ಸಂಗತಿಯಾಗಿದೆ.

Author:

...
Keerthana J

Copy Editor

prajashakthi tv

share
No Reviews