ಕೊರಟಗೆರೆ :
ನಿನ್ನೆ SSLC ರಿಸಲ್ಟ್ ಹೊರಬಿದ್ದಿದ್ದು ಕೊರಟಗೆರೆಯ ರವೀಂದ್ರ ಭಾರತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರವೀಂದ್ರ ಭಾರತಿ ಶಾಲೆ ಶೇಕಡಾ 91. 22 ಪಡೆಯುವ ಮೂಲಕ ಕೊರಟಗೆರೆ ಪಟ್ಟಣಕ್ಕೆ ಮೊದಲ ಸ್ಥಾನ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ಕೊರಟಗೆರೆ ತಾಲೂಕಿನ ಹಳ್ಳಿ-ಹಳ್ಳಿಗಳಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಸುಮಾರು 26 ವರ್ಷಗಳ ಹಿಂದೆ ರವೀಂದ್ರ ಭಾರತಿ ವಿದ್ಯಾಸಂಸ್ಥೆಯನ್ನು ಆರಂಭಿಸಲಾಗಿತ್ತು. ಶಾಲೆಯ ಆರಂಭವಾದಾಗಿನಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಶಾಲಾ ಆಡಳಿತ ಮಂಡಳಿ ನೀಡುತ್ತಾ ಬಂದಿದೆ. 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಯ 22 ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಅಲ್ಲಿ ಪಾಸ್ ಆದರೆ, 27 ಮಂದಿ ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್ ಹಾಗೂ 3 ಮಂದಿ ವಿದ್ಯಾರ್ಥಿಗಳು ಸೆಕೆಂಡ್ ಕ್ಲಾಸ್‌ನಲ್ಲಿ ಪಾಸ್ ಆಗಿದ್ದಾರೆ. ಅಲ್ಲದೇ 4 ವಿಷಯಗಳಲ್ಲಿ 12 ಮಂದಿ ವಿದ್ಯಾರ್ಥಿಗಳು ಔಟ್ ಆಫ್ ಔಟ್ ತೆಗೆದಿದ್ದು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
ಔಟ್ ಆಫ್ ಔಟ್ ಮಾರ್ಕ್ಸ್ ತೆಗೆದ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಶಾಲಾ ಆಡಳಿತ ಮಂಡಳಿ ಸನ್ಮಾನ ಮಾಡುವ ಮೂಲಕ ಮುಂದಿನ ಭವಿಷ್ಯ ಉತ್ತಮವಾಗಿರಲೆಂದು ಶುಭ ಹಾರೈಸಿದ್ದಾರೆ. ಈ ವೇಳೆ ರವೀಂದ್ರ ಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಆರ್. ಮಲ್ಲಿಕಾರ್ಜುನ್, ಉಪಾಧ್ಯಕ್ಷೆ ಉಮಾಮಹೇಶ್ವರಿ, ಕಾರ್ಯದರ್ಶಿ ಡಾ.ಶೋಭ ಕೃಷ್ಣಮೂರ್ತಿ, ಸಹ ಕಾರ್ಯದರ್ಶಿ ಕೆ.ಜಿ.ನವೀನ್ ಕುಮಾರ್, ಖಜಾಂಜಿ ಆದಿ ರಮೇಶ್, ಮುಖ್ಯ ಶಿಕ್ಷಕ ಲಕ್ಷ್ಮೀ ನರಸಿಂಹಮೂರ್ತಿ ಡಿ.ಎಸ್ ಸೇರಿದಂತೆ ಭೋದಕ ಮತ್ತು ಭೋದಕೇತರ ಸಿಬ್ಬಂದಿ ಹಾಜರಿದ್ದರು. ಶಾಲೆಯ ರಿಸಲ್ಟ್ ಬಗ್ಗೆ ರವೀಂದ್ರ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ್ ಮಾತನಾಡಿ, ಈ ಬಾರಿ SSLC ಪರೀಕ್ಷೆಯಲ್ಲಿ ಕೊರಟಗೆರೆ ಪಟ್ಟಣಕ್ಕೆ ನಮ್ಮ ಶಾಲೆಗೆ ಪ್ರಥಮ ಸ್ಥಾನ ಬಂದಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಶ್ರಮವಹಿಸಿ ಹೆಚ್ಚು ಫಲಿತಾಂಶ ತರುವ ಕೆಲಸ ಮಾಡ್ತೀವಿ ಅಂತಾ ಹೇಳಿದರು.
ಈ ವೇಳೆ ಅತ್ಯುತ್ತಮ ಮಾರ್ಕ್ಸ್ ಪಡೆದ ವಿದ್ಯಾರ್ಥಿ ಮಾತನಾಡಿ, ಶಾಲೆಯಲ್ಲಿ ಕೋಚಿಂಗ್ ಉತ್ತಮವಾಗಿದ್ದರಿಂದ ಒಳ್ಳೆ ಮಾರ್ಕ್ಸ್ ಪಡೆಯಲು ಸಾಧ್ಯವಾಯಿತು. ಪ್ರಿಪರೇಟಿಯಲ್ಲಿ ಕಡಿಮೆ ಮಾರ್ಕ್ಸ್ ಬಂದವರಿಗೆ ಸಪರೇಟ್ ಆಗಿ ಹೇಳಿಕೊಡೊದರಿಂದ ಒಳ್ಳೆ ಮಾರ್ಕ್ಸ್ ತೆಗೆಯಲು ಸಾದ್ಯ ಆಯ್ತು ಅಂತಾ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ರವೀಂದ್ರ ಭಾರತಿ ವಿದ್ಯಾಸಂಸ್ಥೆ ಆರಂಭದಿಂದಲೂ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾನೆ ಬಂದಿದೆ. ಶಾಲೆಯ ಶ್ರಮಕ್ಕೆ ಇಂದು ಪ್ರತಿಫಲ ಸಿಕ್ಕಂತಾಗಿದ್ದು, ಮುಂದಿನ ವರ್ಷ ಇದಕ್ಕಿಂತ ಹೆಚ್ಚು ಫಲಿತಾಂಶ ಪಡೆಯುವ ನಿರೀಕ್ಷೆಯನ್ನು ಶಾಲಾ ಆಡಳಿತ ಮಂಡಳಿ ಹೊಂದಿದೆ.