ಶಿರಾ : ಶಿರಾದಲ್ಲಿ ಅತ್ಯಾಧುನಿಕ ಕುರಿ, ಮೇಕೆ ವಧಾಗಾರ ಉದ್ಘಾಟನೆ ಯಾವಾಗ ಗೊತ್ತಾ?

ಕುರಿ ಮತ್ತು ಮೇಕೆ ಮಾಂಸ ಉತ್ಪಾದನಾ ಘಟಕ ಶಿರಾ
ಕುರಿ ಮತ್ತು ಮೇಕೆ ಮಾಂಸ ಉತ್ಪಾದನಾ ಘಟಕ ಶಿರಾ
ತುಮಕೂರು

ಶಿರಾ :

ಶಿರಾ ತಾಲೂಕಿನ ಚೀಲನಹಳ್ಳಿ ಬಳಿ ನಿರ್ಮಾಣವಾಗಿರೋ ಕುರಿ ಮತ್ತು ಮೇಕೆ ಮಾಂಸ ಉತ್ಪಾದನೆ ಮತ್ತು ಆಧುನಿಕ ಸಂಸ್ಕರಣಾ ಕೇಂದ್ರಕ್ಕೆ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್‌ ಹಾಗೂ ಶಾಸಕ ಟಿ.ಬಿ ಜಯಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಜಿಲ್ಲಾ ಪಶುಪಾಲನೆ ನಿರ್ದೇಶಕ ಡಾ.ನಾಗೇಶ್, ತಾಲ್ಲೂಕು ಪಶುಪಾಲನೆ ನಿರ್ದೇಶಕ ರಮೇಶ್ ಕುಮಾರ್, ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷ ಪಿ.ಅರ್ ಮಂಜುನಾಥ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

ಶೀಘ್ರವೇ ಮಾಂಸ ಉತ್ಪಾದನಾ ಘಟಕವನ್ನು ಉದ್ಘಾಟನೆ ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಟಿ.ಬಿ ಜಯಚಂದ್ರ, ಸಚಿವ ವೆಂಕಟೇಶ್‌ ಸೂಚನೆ ನೀಡಿದರು. ಇನ್ನು 15 ದಿನಗಳಲ್ಲಿ ಉದ್ಘಾಟನೆ ಆದರೆ ಮುಖ್ಯಮಂತ್ರಿಯನ್ನು ಕರೆಸುತ್ತೇವೆ ಎಂದು ಹೇಳಿದರು. 

ಇನ್ನು ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ ಕುರಿ ಮತ್ತು ಮೇಕೆ ಮಾಂಸ ಉತ್ಪಾದನೆ ಮತ್ತು ಆಧುನಿಕ ಸಂಸ್ಕರಣಾ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ. ಕಾಮಗಾರಿ ಆದಷ್ಟು ಬೇಗ  ಪೂರ್ಣಗೊಂಡರೆ ಉದ್ಘಾಟನೆ ಆಗಲಿದೆ ಎಂದರು. ಇದರಿಂದ ಶಿರಾ, ಚಿಕ್ಕನಾಯಕನಹಳ್ಳಿ, ಪಾವಗಡ, ಮಧುಗಿರಿ ಹಾಗೂ ಪಕ್ಕದ ಹಿರಿಯೂರು ತಾಲ್ಲೂಕಿನಲ್ಲಿನ ರೈತರು ಮಧ್ಯವರ್ತಿಗಳ ಕಾಟವಿಲ್ಲದೇ ಜೀವಂತ ಕುರಿಯ ತೂಕದ ಹೆಚ್ಚಿನ ಲಾಭ ಪಡೆದುಕೊಳ್ಳುತ್ತಾರೆ. ಜೊತೆಗೆ ಮಾಂಸ ಪ್ರಿಯರಿಗೂ ಆರೋಗ್ಯವಾದಂತಹ ಕುರಿ ಮತ್ತು ಮೇಕೆಯ ಮಾಂಸ ದೊರೆಯುವುದು ಎಂದು ಶಾಸಕ ಟಿ.ಬಿ ಜಯಚಂದ್ರ ಹೇಳಿದರು.

Author:

share
No Reviews