ಪಾವಗಡ : ಇಂದಿನಿಂದ SSLC ಮರು ಪರೀಕ್ಷೆ | ಪಾವಗಡದಲ್ಲಿ ಮಾಸ್ ಕಾಪಿ ಚೀಟಿ ಜೆರಾಕ್ಸ್

ಪಾವಗಡ :  ಇವತ್ತಿನಿಂದ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಆರಂಭವಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್‌ ಆಗಿರೋ ಮಕ್ಕಳು ಎರಡನೇ ಪರೀಕ್ಷೆ ಬರೆದು ಪಾಸ್‌ ಆಗಿ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಿದ್ದಾರೆ. ಆದ್ರೆ ಮರು ಪರೀಕ್ಷೆಯಲ್ಲೂ ಕಾಪಿ ಮಾಡಲು ನೋಟ್ಸ್‌ ಜೆರಾಕ್ಸ್‌ ಪ್ರತಿಯನ್ನು ಪಡೆಯುತ್ತಿರುವ ವಿಡಿಯೋವೊಂದು ವೈರಲ್‌ ಆಗ್ತಿದೆ.

ಹೌದು, ಗಡಿ ತಾಲೂಕು ಪಾವಗಡ ತಾಲೂಕಿನಲ್ಲಿ ಸುಮಾರು 1358 ಮಂದಿ SSLC ಮಕ್ಕಳು ಕನ್ನಡ ಸಬ್ಜೆಕ್ಟ್‌ನಲ್ಲಿ ಫೇಲ್‌ ಆಗಿದ್ದು, ಇಂದು ಪರೀಕ್ಷೆಗೆ ಹಾಜರಾಗಿದ್ರು. ಈ ಬೆನ್ನಲ್ಲೇ ಎಸ್‌ಎಸ್‌ಎಲ್‌ಸಿ ಮರು ಪರೀಕ್ಷೆಯ ಮೊದಲ ದಿನ ಜೆರಾಕ್ಸ್‌ ಅಂಗಡಿಗಳಲ್ಲಿ ಕಾಪಿ ಚೀಟಿ ಜೆರಾಕ್ಸ್‌ ಮಾಡಿಸುತ್ತಿರುವ ದೃಶ್ಯಗಳು ಕಂಡುಬಂದಿದ್ದು, ಕಾಫಿಚೀಟಿ ಜೆರಾಕ್ಸ್‌ ಮಾಡಿಸುತ್ತಿರೋ ವಿಡಿಯೋ ಫುಲ್‌ ವೈರಲ್ ಆಗ್ತಿದೆ.

ಇನ್ನು ಪರೀಕ್ಷಾ ದೃಷ್ಟಿಯಲ್ಲಿ ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಕಾಫಿ ಹೊಡೆಯೋದನ್ನ ತಡೆಯಲು ಶಿಕ್ಷಣ ಇಲಾಖೆ ಸರ್ಕಸ್‌ ಮಾಡ್ತಾನೆ ಇದೆ. ಇತ್ತ ವಿದ್ಯಾರ್ಥಿಗಳು ಕೂತು ಓದಲಾರದ ಸೋಂಬೇರಿಗಳು ನೋಟ್ಸ್‌ ಜೆರಾಕ್ಸ ಮಾಡಿಸಿಕೊಳ್ಳುತ್ತಿದ್ದಾರೆ. ಆದ್ರೆ ಈ ರೀತಿಯ ಕಾಫಿಚೀಟಿ ಹೊಡೆಯೋದ್ರಿಂದ ಮಕ್ಕಳು ಭವಿಷ್ಯವೇ ಹಾಳಾಗಲಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆ ಗಮನಹರಿಸಬೇಕಿದೆ.

 

Author:

...
Keerthana J

Copy Editor

prajashakthi tv

share
No Reviews