TUMAKURU: ಕಲ್ಪತರು ನಾಡು ತುಮಕೂರಿನಲ್ಲಿ ಲೋಕಕಲ್ಯಾಣಾರ್ಥವಾಗಿ ಶ್ರೀ ಚಕ್ರ ಆರಾಧನೆ, ಚಂಡಿಕಾ ಹೋಮ ಮತ್ತು ನವಶಕ್ತಿ ಪೂಜೆಯನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು

ತುಮಕೂರು: 

ಕಲ್ಪತರು ನಾಡು ತುಮಕೂರು ನಗರದ ಅಮಾನಿಕೆರೆಯ ಗಾಜಿನ ಮನೆಯ ಆವರಣದಲ್ಲಿ ವಾಸವಿ ಯುವಜನ ಸಂಘದ ವತಿಯಿಂದ ದೈವ-ದೇವತಾ ಆರಾಧನಾ ಕಾರ್ಯಕ್ರಮಗಳು ಲೋಕ ಕಲ್ಯಾಣಾರ್ಥವಾಗಿ ನಡೆಸಲಾಯಿತು. ಶಕ್ತಿ ದೇವತೆಗಳು ಜಗತ್ತಿನ ಆಧಾರ ಸ್ಥಂಭಗಳು, ಅಷ್ಟದಿಕ್ಕುಗಳಲ್ಲಿನ ಚೈತನ್ಯ ಶಕ್ತಿಗಳು. ಮಾನವನ ಜೀವನದ ಆಗು-ಹೋಗುಗಳಿಗೆ,ಬದುಕು ಬವಣೆಗಳಿಗೆ ಹಾಗೂ ನಂಬಿ ಬಂದವರ ನಂಬಿಕೆಗಳಿಗೆ ಜೀವ ತುಂಬಿ ಮುನ್ನಡೆಸುವ ದೈವಗಳೇ ನವಶಕ್ತಿ ದೈವಗಳು ಆದ್ದರಿಂದ ಈ ಬಾರಿ ತುಮಕೂರು ನಗರದ ಅಮಾನಿಕೆರೆಯ ಗಾಜಿನ ಮನೆ ಆವರಣದಲ್ಲಿ ಲೋಕ ಕಲ್ಯಾಣರ್ಥವಾಗಿ ಶ್ರೀ ಚಕ್ರ ಆರಾಧನೆ, ಚಂಡಿಕಾ ಹೋಮ ಮತ್ತು ನವಶಕ್ತಿ ಪೂಜೆ ನೆರವೇರಿಸಲಾಯಿತು.  

ಗೊರಗುಂಟೆಪಾಳ್ಯದ ವಾಸವಿ ಕನ್ಯಕಾಪರಮೇಶ್ವರಿ ದೇವಾಲಯದ ಅರ್ಚಕ ಚೈತನ್ಯ ಶರ್ಮರ ಪ್ರಧಾನಾಚಾರತ್ವದಲ್ಲಿ 600 ಜನ ಸುಮಂಗಲಿಯರು ಅಪರೂಪದ ಶ್ರೀ ಚಕ್ರ ಆರಾಧನೆ, ನವಶಕ್ತಿ ವೈಭವ ಹಾಗೂ ನವಚಂಡಿ ಹೋಮ  ಹೋಮ  ನಡೆಸಲಾಯಿತು. ವಾಸವಿ ಯುವ ಜನ ಸಂಘದ ಅಧ್ಯಕ್ಷರಾದ ಕೆ. ಎಸ್. ನವೀನ್‌ ಅಧ್ಯಕ್ಷತೆಯಲ್ಲಿ ಹಾಗೂ ಮಾಜಿ  ಎಸ್. ಆರ್. ಶ್ರೀಧರಮೂರ್ತಿ ಅವರ ಮಾರ್ಗದರ್ಶನದಲ್ಲಿ ನೆರವೇರಿಸಲಾಯಿತು. ಪ್ರಮುಖವಾಗಿ ಸರ್ವ ವಿಘ್ನ ನಿವಾರಕ ಗಣಪತಿ, ವಾಸವಿ ಮಾತೆಯನ್ನು ಒಳಗೊಂಡಂತೆ ನವಶಕ್ತಿ ದೇವತೆಗಳು ಸ್ಥಾಪನೆ ಮಾಡಿ ನವಚಂಡಿ ಹೋಮ ನೆರವೇರಿಸಲಾಯಿತು.

ಇನ್ನು ದೇವತಾ ಕಾರ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಒಂಭತ್ತು ಪುಣ್ಯನದಿಗಳಿಂದ ತಂದಂತಹ ಜಲದಿಂದ ಅಭಿಷೇಕ ಮಾಡುವ ಸೌಭಾಗ್ಯ ಮತ್ತು ಶ್ರೀಚಕ್ರಕ್ಕೆ ಪೂಜೆ ಸಾಲಿಸಲು ಅವಕಾಶ ಕಲ್ಪಿಸಲಾಗಿತ್ತು.ಸಾವಿರಾರು ಜನರು ಬೆಳಗ್ಗೆಯಿಂದಲೇ ಹೋಮ ಮತ್ತು ಪೂಜೆಯಲ್ಲಿ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದ್ರೂ. ಇನ್ನು ಮಹಿಳೆಯರಿಗೆ ಪ್ರತ್ಯೇಕವಾಗಿ ಬಾಗಿನ ಮತ್ತು ಪ್ರತಿಯೊಬ್ಬರಿಗೂ ಪ್ರಸಾದದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೆರವೇರಿಸಲಾಯಿತು

Author:

...
Sub Editor

ManyaSoft Admin

share
No Reviews