ಕಳೆದೊಂದು ವರ್ಷದಿಂದ ಧನ್ಯತಾ ನನಗೆ ಪರಿಚಯವಿದ್ದು, ಅವರು ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರಳವಾಗಿ ಮದುವೆ ಆಗಬೇಕು ಅನ್ನೋ ಆಸೆ ನನಗಿತ್ತು. ರಿಜಿಸ್ಟರ್ ಮ್ಯಾರೇಜ್ ಆಗಬೇಕು ಅಂದುಕೊಂಡಿದ್ದೆ. ಆದರೆ ಮನೆಯವರ ಒತ್ತಡ, ಊರಿಗೆಲ್ಲಾ ಊಟ ಹಾಕಿಸಬೇಕು ಅನ್ನೋದು ನನ್ನ ತಂದೆಯ ಆಸೆ. ನನಗೆ ಗೆಳೆಯರ ಬಳಗ ದೊಡ್ಡದು. ಇಂಡಸ್ಟ್ರಿಯ ಗೆಳೆಯರು ಜಾಸ್ತಿ ಹೀಗಾಗಿ ಮೈಸೂರು ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಮದುವೆ ಆಗ್ತಿದ್ದೀನಿ ಎಂದು ಡಾಲಿ ಧನಂಜಯ್ ಹೇಳಿದ್ದಾರೆ.
ಇನ್ನು ಧನ್ಯತಾ ಮಾತನಾಡಿ ಡಾಲಿಯ ಸರಳ ಗುಣ ನನಗೆ ಇಷ್ಟ ಆಯಿತು. ನಮ್ಮಿಬ್ಬರದ್ದು ಒಂದೇ ರೀತಿಯ ಮನಸ್ಥಿತಿ. ನಾವು ಫ್ರೆಂಡ್ಸ್ ಥರಾನೇ ಇದ್ವಿ. ಡಾಲಿ ಧನಂಜಯ ನನ್ನ ಥರಾ, ನನ್ನ ಫ್ಯಾಮಿಲಿಗೂ ಹತ್ತಿರ ಆದರು. ಡಾಲಿಯಿಂದ ನಾನು ಸಿನಿಮಾಗಳನ್ನು ನೋಡೋಕೆ ಶುರು ಮಾಡಿದೆ. ರತ್ನನ್ ಪ್ರಪಂಚ ಸಿನಿಮಾ ನನ್ನ ಫೇವರಿಟ್ ಎಂದು ಹೇಳಿದರು.
ಧನಂಜಯ್‌ಗೆ ಸರಳವಾಗಿ ವಿವಾಹ ಆಗಬೇಕು ಅನ್ನೋ ಆಸೆ ಇತ್ತಂತೆ. ಆದರೆ ನಾನು ಸರಳ ವಿವಾಹ ಅಂದ್ರು 2000 ಜನ ಸೇರ್ತಾರೆ. ಹೀಗಾಗಿ ನಾನು ಜನರ ಸಮ್ಮುಖದಲ್ಲಿ ಮದುವೆ ಆಗ್ತಿದ್ದೀನಿ. ಮದುವೆಗೆ ಬಂದು ಹೋಗುವ ಅಭಿಮಾನಿಗಳಿಗೆ ಸುಲಭ ಆಗಲಿ ಅಂತ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದರು. ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಅಭಿಮಾನಿಗಳಿಗೆ ವಿದ್ಯಾಪತಿ ದ್ವಾರ ಇರಲಿದೆ. ವಿದ್ಯಾಪತಿ ದ್ವಾರದಿಂದ ಫ್ಯಾನ್ಸ್ ಬಂದ್ರೆ ಆರಾಮಾಗಿ ಸ್ಟೇಜ್ ಹತ್ತಿರ ಬಂದು ಮದುವೆ ಸಂಭ್ರಮ ನೋಡಿ ನಮ್ಮನ್ನು ನೋಡಿ ಶುಭ ಹಾರೈಸಿ ಎಂದು ಹೇಳಿದ್ದಾರೆ.
ಎಲ್ಲರ ಜೊತೆ ಅಭಿಮಾನಿಗಳನ್ನು ಸೇರಿಸಲ್ಲ. ಎಲ್ಲರನ್ನು ಸ್ಟೇಜ್ ಮೇಲೆ ಕರೆಸಬೇಕು ಅಂದ್ರೆ ಕಷ್ಟ ಆಗುತ್ತೆ. ಅಭಿಮಾನಿಗಳು ವಿದ್ಯಾಪತಿ ದ್ವಾರದ ಸಾಲಿನಲ್ಲಿ ಬಂದರೆ ಸಾಕು ಕುಳಿತು ಮದುವೆ ಸಂಭ್ರಮವನ್ನು ನೋಡಬಹುದು. ಊಟ ಮಾಡಿಕೊಂಡು ಹೋಗಲು ವ್ಯವಸ್ಥೆ ಮಾಡಲಾಗುವುದು ಎಂದು ನಟ ಡಾಲಿ ಧನಂಜಯ್ ತಿಳಿಸಿದ್ದಾರೆ.