ಗುಬ್ಬಿ:
ಗುಬ್ಬಿ ತಾಲೂಕಿನಾದ್ಯಂತ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಸಂಚಾರ ಕೈಗೊಂಡಿದ್ದು, ಬೈಪಾಸ್ ರಸ್ತೆಯಲ್ಲಿರುವ ಕಳ್ಳಿಪಾಳ್ಯ ಗೇಟ್ ಬಳಿ ಮೇಲ್ಸೆತುವೆ ನಿರ್ಮಾಣಕ್ಕೆ ಸ್ಥಳ ವೀಕ್ಷಣೆ ಮಾಡಿದ್ರು. ಈ ವೇಳೆ ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ , ಯೋಗಾ ನಂದಕುಮಾರ್, ಗ್ರಾಪಂ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ಸತ್ಯನಾರಾಯಣ, ಸದಸ್ಯರಾದ ಚನ್ನಬಸವೆಗೌಡ, ತಾಪಂ ಮಾಜಿ ಸದಸ್ಯ ಕರೆತಿಮ್ಮಯ್ಯ ಸೇರಿ ಹಲವರು ಸೋಮಣ್ಣಗೆ ಸಾಥ್ ನೀಡಿದ್ರು. ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಬರುವ ಬೈಪಾಸ್ ರಸ್ತೆಯಲ್ಲಿ ಕಳ್ಳಿಪಾಳ್ಯ ಗೇಟ್ ನಿಂದ ಅಡಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹತ್ತಾರು ಗ್ರಾಮಗಳಿಗೆ ಪ್ರವೇಶಿಸಲು ಮೇಲ್ಸೆತುವೆ ಅವಶ್ಯಕವಾಗಿ ಬೇಕಾಗಿದೆ. ಹೀಗಾಗಿ ಮೇಲ್ಸೆತುವೆ ನಿರ್ಮಾಣಕ್ಕೆ ರೈಲ್ವೆ ಸಚಿವ ವಿ ಸೋಮಣ್ಣ ಸ್ಥಳ ವೀಕ್ಷಿಸಿದ್ದು, ಶೀಘ್ರವೇ ಮೇಲ್ಸೇತುವೆ ನಿರ್ಮಾಣದ ಭರವಸೆ ನೀಡಿದರು.
ಕಳ್ಳಿಪಾಳ್ಯ ಗೇಟ್ ಬಳಿ ಸ್ಥಳೀಯರಿಂದ ಸಚಿವ ಸೋಮಣ್ಣ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡ್ರು. ನಿತ್ಯ ವಾಹನಗಳ ಸಂಚಾರ, ಸಾವಿರಾರು ಮಂದಿ ಓಡಾಟದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಅಂದಾಜು 40 ರಿಂದ 45 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ರಸ್ತೆ ತುರ್ತು ನಿರ್ಮಿಸುವ ಭರವಸೆ ನೀಡಿದರು.
ಇನ್ನು ಕಳ್ಳಿಪಾಳ್ಯ ಗೇಟ್ ಮೂಲಕ ಅಡಗೂರು, ಧೂಳನಹಳ್ಳಿ, ಪ್ರಭುವನಹಳ್ಳಿ ಹೀಗೇ ಅನೇಕ ಹಳ್ಳಿಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ಮೇಲ್ಸೆತುವೆ ನಿರ್ಮಾಣ ಅವಶ್ಯಕವಾಗಿ ಬೇಕಾಗಿದೆ. ಸಂಸದರಾಗಿ ಆಯ್ಕೆಯಾದ ಸಮಯದಲ್ಲಿ ವಿ.ಸೋಮಣ್ಣ ಅವರು ರಸ್ತೆ ಮೇಲ್ಸೇತುವೆ ಬಗ್ಗೆ ಭರವಸೆ ನೀಡಿದ್ರು. ಇದೀಗ ನುಡಿದಂತೆ ನಡೆದಿದ್ದಾರೆ ಎಂದು ಸ್ಥಳೀಯರು ಸಚಿವ ಸೋಮಣ್ಣ ಬಗ್ಗೆ ಶ್ಲಾಘಿಸಿದರು.