CRICKET : 6 ವರ್ಷಗಳ ಬಳಿಕ ಅಗ್ರಸ್ಥಾನಕ್ಕೇರಿದ ಸ್ಮೃತಿ ಮಂಧಾನ

CRICKET NEWS : ಭಾರತ ಮಹಿಳಾ ಕ್ರಿಕೆಟ್‌ಗೆ ಮತ್ತೊಂದು ಹೆಮ್ಮೆ ಕೂಡಿಹಾಕಿದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ, ಐಸಿಸಿ ಏಕದಿನ (ODI) ಬ್ಯಾಟರ್‌ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವುದು ಅಭಿಮಾನಿಗಳಿಗೆ ಹರ್ಷದ ಸುದ್ದಿಯಾಗಿದೆ. ಕಳೆದ ಬಾರಿ ದ್ವಿತೀಯ ಸ್ಥಾನದಲ್ಲಿದ್ದ ಮಂಧಾನ, ಈ ಬಾರಿ 727 ಅಂಕಗಳನ್ನು ಗಳಿಸಿ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ.

ಇದರೊಂದಿಗೆ ಸ್ಮೃತಿಗೆ ಇದು ಎರಡನೇ ಬಾರಿಗೆ ಟಾಪ್-1 ಸ್ಥಾನ ಲಭ್ಯವಾಗುತ್ತಿದೆ. ಮುಂಚೆ 2019ರಲ್ಲಿ ಅವರು ಶ್ರೇಯಸ್ಥ ಸ್ಥಾನ ಪಡೆದಿದ್ದರು. ಆದರೆ ಆ ನಂತರದಿಂದ ಅವರು ಮತ್ತೆ ಅಗ್ರಸ್ಥಾನಕ್ಕೇರಲಾಗಿರಲಿಲ್ಲ. ಈ ಬಾರಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ನಡುವಣ ತ್ರಿಕೋನ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ, ಆರು ವರ್ಷಗಳ ಬಳಿಕ ಅವರು ಮತ್ತೆ ಗೌರವಾನ್ವಿತ ಸ್ಥಾನದಲ್ಲೇರುವುದು ವಿಶೇಷ.

ಟಾಪ್-10ರ ಪಟ್ಟಿಯಲ್ಲಿ ಭಾರತದಿಂದ ಸ್ಮೃತಿಮಾತ್ರ ಇದ್ದಾರೆ. ಇಂಗ್ಲೆಂಡ್ನ ನಟಾಲಿ ಸ್ಕಿವರ್-ಬ್ರಂಟ್ 719 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಡ್ ಮೂರನೇ ಸ್ಥಾನ ಪಡೆದಿದ್ದಾರೆ. ಇವರು ಇಬ್ಬರೂ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಸ್ಮೃತಿಗೆ ಸ್ಪರ್ಧಿಯಾಗಬಹುದು.

ಇನ್ನೂ ಟಿ20 ಶ್ರೇಣಿಯಲ್ಲಿಯೂ ಸ್ಮೃತಿ ಮಂಧಾನ ಮಿಂಚುತ್ತಿದ್ದಾರೆ. ಅವರು 754 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಈ ಪಟ್ಟಿಯಲ್ಲಿಯೂ ಭಾರತದಿಂದ ಏಕೈಕ ಬ್ಯಾಟರ್ ಆಗಿ ಕಾಣಿಸಿಕೊಂಡಿದ್ದಾರೆ. ಟಿ20 ರ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾದ ಬೆತ್ ಮೂನಿ (794 ಅಂಕ) ಮೊದಲ ಸ್ಥಾನದಲ್ಲಿದ್ದರೆ, ವೆಸ್ಟ್ ಇಂಡೀಸ್‌ನ ಹೇಲಿ ಮ್ಯಾಥ್ಯೂಸ್ (765) ದ್ವಿತೀಯ ಸ್ಥಾನದಲ್ಲಿದ್ದಾರೆ.

ಇನ್ನು ಮಂಧಾನ ಅವರ ಈ ಸಾಧನೆ ಭಾರತ ಮಹಿಳಾ ಕ್ರಿಕೆಟ್‌ಗೆ ಮತ್ತೊಂದು ಗರಿಮೆಯ ಕ್ಷಣ  ಮತ್ತು ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಗುರಿಗಳನ್ನು ಮುಟ್ಟುವ ನಿರೀಕ್ಷೆಯಿದೆ.

 

 

Author:

...
Keerthana J

Copy Editor

prajashakthi tv

share
No Reviews