ದೇಹದಲ್ಲಿ ಯೂರಿಕ್ ಆಸಿಡ್ ಅಂಶ ಹೆಚ್ಚಾದಾಗ ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ, ಇದರಿಂದ ಕಿಡ್ನಿ ವೈಫಲ್ಯ ಕೂಡ ಉಂಟಾಗುತ್ತದೆ. ಆದ್ದರಿಂದ ಕೆಲವು ಮನೆಮದ್ದುಗಳು ಯೂರಿಕ್ ಆಮ್ಲವನ್ನು ಕಡಿಮೆ ಮಾಡುವಲ್ಲಿ ಪರಿಣಾಮ ಮಾಡುತ್ತದೆ, ಹೌದು ಅಡುಗೆ ಮನೆಯಲ್ಲಿ ಸಿಗುವಂತಹ ಜೀರಿಗೆಯಿಂದ ಯೂರಿಕ್ ಆಮ್ಲವನ್ನು ಕಡಿಮೆ ಮಾಡಬಹುದಾಗಿದೆ.
ಹೌದು ಜೀರಿಗೆ ಚಯಾಪಚಾಯ ಕ್ರಿಯೆಯನ್ನು ಹೆಚ್ಚಿಸಿ, ದೇಹದಲ್ಲಿ ಯೂರಿಕ್ ಆಸಿಡ್ ಅಂಶ ಹೆಚ್ಚಾಗದಂತೆ ತಡೆಯುತ್ತದೆ, ಇದು ಕೀಲುಗಳಲ್ಲಿ ಸಂಗ್ರಹವಾದ ಯೂರಿಕ್ ಆಮ್ಲಾವನ್ನು ಶೋಧಿಸಲು ಸಹಾಯ ಮಾಡುತ್ತದೆ. ಅಲ್ದೇ ಜೀರಿಗೆಯಲ್ಲಿರುವ ಪೋಷಕಾಂಶಗಳು ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಈ ಮೂಲಕ ದೇಹದಲ್ಲಿನ ಯೂರಿಕ್ ಆಮ್ಲಾದ ಮಟ್ಟ ಕಡಿಮೆಯಾಗುತ್ತದೆ.
ಜೀರಿಗೆ ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಇದು ಯೂರಿಕ್ ಆಮ್ಲಾದಿಂದ ಉಂಟಾಗುವ ಊತ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೀರಿಗೆ ದೇಹದ pH ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಯೂರಿಕ್ ಆಸಿಡ್ ಸ್ಫಟಿಕ ರಚನೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
ಒಂದು ಟೀ ಚಮಚ ಜೀರಿಗೆಯನ್ನು ಒಂದು ಲೋಟ ನೀರಿನಲ್ಲಿ ರಾತ್ರಿಯಿಡೀ ನೆನೆಸಿಟ್ಟು, ಬೆಳಗ್ಗೆ ಇದನ್ನು ಸೋಸಿ ಕುಡಿಯುವುದರಿಂದ ದೇಹದಲ್ಲಿರೋ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಇದನ್ನು ಸೇವಿಸುವುದರಿಂದ ಯೂರಿಕ್ ಆಮ್ಲಾದ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಜೀರಿಗೆ ಚಹಾ ಕೂಡ ಉತ್ತಮ ಆಯ್ಕೆಯಾಗಿದೆ . ಇದಕ್ಕಾಗಿ, ಒಂದು ಲೋಟ ನೀರಿಗೆ ಒಂದು ಟೀ ಚಮಚ ಜೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಚೆನ್ನಾಗಿ ಕುದಿಸಿ ನಂತರ ಫಿಲ್ಟರ್ ಮಾಡಿ, ನಿಮಗೆ ಬೇಕಾದರೆ ರುಚಿಗೆ ಜೇನುತುಪ್ಪ ಸೇರಿಸಿ ಸೇವಿಸಿ. ಈ ಚಹಾ ಯೂರಿಕ್ ಆಮ್ಲವನ್ನು ನಿಯಂತ್ರಿಸುವುದಲ್ಲದೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಜೀರಿಗೆ ಪುಡಿಯು ಕೀಲುಗಳಲ್ಲಿ ಸಂಗ್ರಹವಾದ ಯೂರಿಕ್ ಆಮ್ಲವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ, ಜೀರಿಗೆಯನ್ನು ಹುರಿದು ನುಣ್ಣಗೆ ಪುಡಿ ಮಾಡಿ. ಈ ಪುಡಿಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಲಾಗಿದೆ. ಊಟದ ನಂತರ ಬೆಚ್ಚಗಿನ ನೀರಿನೊಂದಿಗೆ ಅರ್ಧ ಟೀ ಚಮಚ ಜೀರಿಗೆ ಪುಡಿಯನ್ನು ತೆಗೆದುಕೊಳ್ಳಿ, ಈ ರೀತಿ ಮಾಡುವುದರಿಂದ ಯೂರಿಕ್ ಆಮ್ಲದ ಮಟ್ಟವನ್ನು ನಿಯಂತ್ರಿಸುತ್ತದೆ.