IPL 2025 : ಐಪಿಎಲ್ ಇತಿಹಾಸದಲ್ಲೇ ಯಾವ ನಾಯಕನಿಂದಲೂ ಸಾಧ್ಯವಾಗದ ವಿಶಿಷ್ಟ ದಾಖಲೆ ಸೃಷ್ಟಿಸಿದ ಶ್ರೇಯಸ್ ಅಯ್ಯರ್

CRICKET : ನೆನ್ನೆ ನಡೆದ ಈಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡ ನೀಡಿದ ಸವಾಲಿನ ಟಾರ್ಗೆಟ್‌ನ್ನು ಅತ್ಯಂತ ಸುಲಭವಾಗಿ ಬೆನ್ನಟ್ಟಿ, ಪಂಜಾಬ್ ಕಿಂಗ್ಸ್ ರಾಜಸ್ಥಾನ ರಾಯಲ್ಸ್ ವಿರುದ್ಧ 10 ವಿಕೆಟ್ ಗಳ ಸುಲಭ ಜಯ ಸಾಧಿಸುವ ಮೂಲಕ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸ್ಥಾನವನ್ನು ಖಾತರಿಪಡಿಸಿಕೊಂಡಿದೆ. ಇದರೊಂದಿಗೆ ಪಂಜಾಬ್ ತನ್ನ 12 ಪಂದ್ಯಗಳಲ್ಲಿ 17 ಅಂಕಗಳನ್ನು ಗಳಿಸಿ, ಲೀಗ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಆರ್‌ಸಿಬಿ ಕೂಡ 17 ಅಂಕ ಹೊಂದಿದ್ದು, ಉತ್ತಮ ನೆಟ್ ರನ್ ರೇಟ್‌ನ ಆಧಾರದಲ್ಲಿ ದ್ವಿತೀಯ ಸ್ಥಾನದಲ್ಲಿದೆ.

ಇನ್ನು ಪಂಜಾಬ್ ತಂಡವನ್ನು ಮೊದಲ ಬಾರಿಗೆ ನಾಯಕನಾಗಿ ಪ್ಲೇಆಫ್ ಹಂತಕ್ಕೆ ಮುನ್ನಡೆಸಿದ ಶ್ರೇಯಸ್ ಅಯ್ಯರ್ ಅವರು ಹೊಸ ದಾಖಲೆ ಸ್ಥಾಪಿಸಿದ್ದಾರೆ.ಹೌದು, ಮೂರು ಭಿನ್ನ ಐಪಿಎಲ್ ಫ್ರಾಂಚೈಸಿಗಳ ನಾಯಕನಾಗಿ ಪ್ಲೇಆಫ್ ಹಂತ ತಲುಪಿದ ಮೊದಲ ಆಟಗಾರರ ಪೈಕಿ ಶ್ರೇಯಸ್‌ ಅಯ್ಯರ್‌ ಒಬ್ಬರಾಗಿದ್ದಾರೆ. ಅಯ್ಯರ್.2019 ಮತ್ತು 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್, 2024ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಇನ್ನು ಈಗ ಪಂಜಾಬ್ ಕಿಂಗ್ಸ್. ಇದು ಅಯ್ಯರ್ ಅವರ ನಾಯಕತ್ವ ಶಕ್ತಿ ಮತ್ತು ತಾಂತ್ರಿಕ ಚಾತುರ್ಯದ ಸ್ಪಷ್ಟ ಸಾಕ್ಷಿ.

ಇದೇ ವೇಳೆ, ಮೂರು ವಿಭಿನ್ನ ಐಪಿಎಲ್ ಫ್ರಾಂಚೈಸಿಗಳ ಪರವಾಗಿ ಆಡಿದ ಐದನೇ ಆಟಗಾರ ಎಂಬ ಹೆಗ್ಗಳಿಕೆಯೂ ಶ್ರೇಯಸ್ ಅಯ್ಯರ್‌ವರಿಗೆ ಸೇರಿದೆ. ಈ ಪಟ್ಟಿಯಲ್ಲಿ ಸ್ಟೀವ್ ಸ್ಮಿತ್, ಕುಮಾರ್ ಸಂಗಕ್ಕಾರ, ಮಹೇಲಾ ಜಯವರ್ಧನೆ ಮತ್ತು ಅಜಿಂಕ್ಯಾ ರಹಾನೆ ಅವರೂ ಇದ್ದಾರೆ.

ಪಂಜಾಬ್ ಕಿಂಗ್ಸ್ ಈಗ ತಮ್ಮ ಕೊನೆಯ ಎರಡು ಲೀಗ್ ಪಂದ್ಯಗಳನ್ನು ಮೇ 24ರಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು 26ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಈ ಪಂದ್ಯಗಳ ಫಲಿತಾಂಶ ಪ್ಲೇಆಫ್ ಪಟ್ಟಿಯಲ್ಲಿ ಕ್ರಮ ನಿರ್ಧರಿಸುವಲ್ಲಿ ನಿರ್ಣಾಯಕವಾಗಲಿದೆ.

Author:

...
Keerthana J

Copy Editor

prajashakthi tv

share
No Reviews