ಶಿರಾ : ಯಮದಾರಿಯಾದ ರಸ್ತೆ... ಸವಾರರು ಸುಸ್ತೋ ಸುಸ್ತೋ..!

ಶಿರಾ - ಅಮರಾಪುರ ರಸ್ತೆ
ಶಿರಾ - ಅಮರಾಪುರ ರಸ್ತೆ
ತುಮಕೂರು

ಶಿರಾ :

ಕಾಲಿಟ್ಟರೇ ಸಾಕು ಬರೀ ಗುಂಡಿಗಳು ತುಂಬು ಗರ್ಭಿಣಿ ಏನಾದರೂ ಈ ರಸ್ತೆಯಲ್ಲಿ ಹೋದರೆ ಉಚಿತವಾಗಿಯೇ ಹೆರಿಗೆ ಆಗೋದಂತೂ ಫಿಕ್ಸ್. ಪ್ರತಿನಿತ್ಯ ಈ ರಸ್ತೆಯಲ್ಲಿ ಗುಂಡಿಯಲ್ಲಿ ಬಿದ್ದು ಹೋಗುವಂತ ಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯಲ್ಲಿ ಓಡಾಡೊ ಸವಾರರ ಜೀವಕ್ಕೆ ಮಾತ್ರ ಗ್ಯಾರಂಟಿನೇ ಇಲ್ಲದಂತಾಗಿದೆ, ಯಾಕೆಂದರೆ ಗುಂಡಿಯಿಂದ ಅಪಘಾತಗಳಾಗಿ ಅನೇಕರು ಆಸ್ಪತ್ರೆ ಪಾಲಾಗ್ತಿದ್ದಾರೆ, ಅಷ್ಟಕ್ಕೂ ಇದು ಶಿರಾ- ಅಮರಪುರ ರಸ್ತೆ ಯಮದಾರಿಗೆ ದಾರಿ ಕಲ್ಪಿಸುವ ರಸ್ತೆಯಾಗಿದೆ ಅಂದ್ರೆ ತಪ್ಪಾಗಲ್ಲ.

ಶಿರಾ ನಗರದಿಂದ ಅಮರಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ಸವಾರರು ಮಾತ್ರ ಹೈರಾಣಾಗಿದ್ದಾರೆ.  ಡಾಂಬರ್‌ ಕಾಣದ ರಸ್ತೆಯಲ್ಲಿ ನೂರಾರು ಗುಂಡಿಗಳಿವೆ. ಈ ಗುಂಡಿಗಳಲ್ಲಿ ಅನೇಕರು ಬಿದ್ದು ಆಸ್ಪತ್ರೆ ಪಾಲಾಗಿರೋ ಉದಾಹರಣೆ ಕೂಡ ಇವೆ. ಇನ್ನು ಈ ರಸ್ತೆಯಲ್ಲಿ ಗುಂಡಿಗಳು ಇರುವುದರಿಂದ ಗಾಡಿಗಳು ವೇಗವಾಗಿ ಹೋದ್ರಂಥೂ ಧೂಳು ಏಳುತ್ತದೆ, ಕಿರಿದಾದ ರಸ್ತೆಯಲ್ಲಿ ಎದುರುಗಡೆ ವಾಹನ ಬಂದರೆ ಪಕ್ಕದಲ್ಲಿ ಹೋಗಲು ಜಾಗ ಕೂಡ ಇಲ್ಲ, ಹೀಗಾಗಿ ಅಪಘಾತ ಸಂಭವಿಸುತ್ತಲೇ ಇವೆ.

ಕಳೆದ ಮೂರ್ನಾಲ್ಕು ವರ್ಷದಿಂದ ಈ ರಸ್ತೆ ಇದೇ ಸ್ಥಿತಿಯಲ್ಲಿದ್ದು, ಒಮ್ಮೆಯೂ ರಸ್ತೆಗೆ ಡಾಂಬರು ಹಾಕಿಲ್ಲ, ಗುಂಡಿಗೆ ಮಾತ್ರ ತೇಪೆ ಹಾಕಿ ಹೋಗ್ತಾರೆ ಅದು ಸ್ವಲ್ಪ ದಿನ ಆದಮೇಲೆ ಮತ್ತೆ ಗುಂಡಿ ಬೀಳುತ್ತೆ. ನಾವು ದಿನ ಈ ರೋಡ್‌ನಲ್ಲಿ ಹೋಗಲು ಸಂಕಷ್ಟ ಪಡುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಈ ರಸ್ತೆಯ ಕೆಲವು ಕಡೆ ಕಾಮಗಾರಿ ನಡೆಯುತ್ತಿದ್ದು, ಅಲ್ಲಲ್ಲಿ ಮಣ್ಣನ್ನು ಸುರಿಯಲಾಗಿದೆ. ಇದರಿಂದ ಗುತ್ತಿಗೆದಾರರು ಮಣ್ಣಿನ ಮೇಲೆ ಪ್ರತಿ ದಿನ ನೀರು ಹಾಕಬೇಕು ಅದರೆ ಮಣ್ಣಿನ ಮೇಲೆ ನೀರು ಹಾಕದಿರುವುದರಿಂದ ಕಣ್ಣಿಗೆ ದೂಳು ಬಿದ್ದು ಅಪಘಾತಗಳು ಸಂಭವಿಸಿ ಸಾವು ನೋವು ಸಂಭವಿಸುತ್ತೆ ಅಂತಾ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ರಸ್ತೆಗೆ ಡಾಂಬರೀಕರಣ ಮಾಡಿ ಅಪಘಾತ ತಪ್ಪಿಸಿ, ಸವಾರರ ಜೀವವನ್ನು ರಕ್ಷಣೆ ಮಾಡಬೇಕಿದೆ.

Author:

...
Editor

ManyaSoft Admin

Ads in Post
share
No Reviews