ಶಿರಾ: ಎರಡು ಬಾರಿ ಗ್ರಾಮ ಸಭೆ ಮುಂದೂಡಿಕೆ, ಕೆರಳಿದ ಗ್ರಾಮಸ್ಥರು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ತುಮಕೂರು

ಶಿರಾ:

ಶಿರಾ ತಾಲೂಕಿನ ಹಂದಿಕುಂಟೆ ಗ್ರಾಮ ಸಭೆಯಲ್ಲಿ ಸದಸ್ಯರು ಹಾಗೂ ಪಿಡಿಒ ಇಲ್ಲದ ಕಾರಣ ಗ್ರಾಮ ಸಭೆಯನ್ನು ಮುಂದೂಡಿಕೆ ಮಾಡಲಾಯಿತು. ಸದ್ಯ ಗ್ರಾಮ ಸಭೆಯ ಖಾಲಿ ಕುರ್ಚಿಗಳ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌ ಆಗಿದೆ. ಗ್ರಾಮ ಪಂಚಾಯ್ತಿಯಲ್ಲಿ 19 ಮಂದಿ ಸದಸ್ಯರು ಇದ್ದು, ಕೇವಲ 8 ಮಂದಿ ಸದಸ್ಯರು ಮಾತ್ರ ಹಾಜರಿದ್ದರು. ಉಳಿದ ಗ್ರಾಮ ಸದಸ್ಯರು ಗೈರಾಗಿದ್ದು ಸಭೆಯನ್ನು ಕ್ಯಾನ್ಸಲ್‌ ಮಾಡಲಾಯಿತು.

ಗ್ರಾಮ ಪಂಚಾಯತ್‌ ಪಿಡಿಒ ಅವರು ನ್ಯಾಯಾಲಯದಲ್ಲಿ ಪ್ರಕರಣ ಇದ್ದ ಕಾರಣ ಕೋರ್ಟ್‌ಗೆ ಹಾಜರಾಗಿದ್ದ ಕಾರಣ ಸಭೆಗೆ ಗೈರಾಗಿದ್ದರಂತೆ.  ಪಿಡಿಒ ಬಿಟ್ಟು ಉಳಿದ ಅಧಿಕಾರಿಗಳಾದರೂ ಸಭೆಗೆ ಹಾಜರಾಗಬೇಕಿತ್ತು, ಆದರೆ ಅವರು ಕೂಡ ಸಭೆಗೆ ಗೈರಾಗಿದ್ದರು. ಕೇವಲ ಕೆಲ ಇಲಾಖೆ ಅಧಿಕಾರಿಗಳು ಮಾತ್ರ ಹಾಜರಾಗಿದ್ದರು. ಈಗಾಗಲೇ ಎರಡು ಬಾರಿ ಸಭೆಯನ್ನು ಮುಂದೂಡಿಕೆಯಾಗಿದ್ದು ಗ್ರಾಮಸ್ಥರು ಕೆಂಡಾಮಂಡಲರಾಗಿದ್ದಾರೆ.

ಸಭೆ ಮುಂದೂಡಿಕೆ ಆಗಿರೋ ಬಗ್ಗೆ ಪ್ರಜಾಶಕ್ತಿ ವರದಿಗಾರರು ಕಾರ್ಯ ನಿರ್ವಾಹಕ ಅಧಿಕಾರಿಗೆ ಕರೆ ಮಾಡಿ ಕೇಳಿದ್ದಕ್ಕೆ, ಅಧಿಕಾರಿ ನಾನು ಕಾರ್ಯ ನಿಮಿತ್ತ ಬೇರೆ ಪಂಚಾಯತ್ ವ್ಯಾಪ್ತಿಯಲ್ಲಿ ಇರುವೆ ಅಲ್ಲಿ ನೋಡಲ್ ಅಧಿಕಾರಿ ಹೋಗಿದ್ದಾರೆ, ವಿಚಾರಿಸಿ ಕ್ರಮ ಕೈಗೊಳ್ಳಲಾಗುತ್ತೆ ಎಂದು ತಿಳಿಸಿದರು. ಒಟ್ಟಾರೆ ಗ್ರಾಮಸಭೆ ಮೂಲಕ ಗ್ರಾಮದ ಸಮಸ್ಯೆಗಳನ್ನು ಪರಿಹರಿಸಬೇಕಿದ್ದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರು ಬೇಸತ್ತಿದ್ದಾರೆ.

Author:

share
No Reviews