ಶಿರಾ:
ಶಿರಾ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ರು ಅಭಿವೃದಿ ಮಾತ್ರ ಕುಂಠುತ್ತಲೇ ಸಾಗುತ್ತಿದೆ. ಇದಕ್ಕೆ ಸ್ಪಷ್ಟ ಉದಾರಣೆಯಂತಿದೆ ಶಿರಾ ನಗರದ 30ನೇ ವಾರ್ಡ್ನ ದುಸ್ಥಿತಿ. ಹೌದು ಶಿರಾ ನಗರದ 30ನೇ ವಾರ್ಡ್ನ ವಿದ್ಯಾನಗರದಲ್ಲಿ ಚರಂಡಿಗಳಲ್ಲಿ ಹೂಳು ತುಂಬಿಕೊಂಡ ಪರಿಣಾಮ ಚರಂಡಿ ನೀರು ಹರಿಯದೇ ರಸ್ತೆಯಲ್ಲೇ ಹರಿಯುತ್ತಿದೆ, ಇದ್ರಿಂದ ದುರ್ನಾತ ಬೀರುತ್ತಿದ್ದು ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ. ಮನೆಗಳ ಮುಂದೆಯೇ ಕೊಳಚೆ ನೀರು ನಿಲ್ತಿದ್ದು, ಸಂಜೆ ಆದ್ರೆ ಸಾಕು ಸೊಳ್ಳೆ ಕಾಟ ಹೆಚ್ಚಾಗ್ತಿದೆ. ನಗರ ಸಭೆ ಸಿಬ್ಬಂದಿ ಚರಂಡಿಗಳನ್ನು ಕ್ಲೀನ್ ಮಾಡಿಸುವ ಗೋಜಿಗೆ ಹೋಗ್ತಾ ಇಲ್ಲ ಅಂತಾ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಈ ಬಡಾವಣೆಯ ಏರಿಯಾಗಳಿಗೆ ಸುಗಮ ಸಂಚಾರಕ್ಕಾಗಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಮಾಡಿದ್ದಾರೆ, ಆದ್ರೆ ಕಾಮಗಾರಿ ಸರಿಯಾಗಿ ಮಾಡದ ಪರಿಣಾಮ ಚರಂಡಿಯಲ್ಲಿ ಹುಲ್ಲು ಬೆಳೆದು ಕೊಳಚೆ ನೀರು ಸರಾಗವಾಗಿ ಹರಿದು ಹೋಗ್ತಿಲ್ಲ. ಇಷ್ಟು ಸಮಸ್ಯೆ ಇದ್ರು ನಗರಸಭೆ ಆದಿಕಾರಿಗಳು ಮಾತ್ರ ಸಮಸ್ಯೆಯನ್ನು ಪರಿಹರಿಸಲು ಹಿಂದೇಟು ಹಾಕ್ತಿದ್ದಾರೆ..ಇದ್ರ ಜೊತೆಗೆ ಕೆಲ ಕಾಮಗಾರಿಗಾಗಿ ರಸ್ತೆ ಅಗೆದು ಹಾಗೆ ಬಿಟ್ಟಿದ್ದಾರೆ, ಇದ್ರಿಂದ ನಿತ್ಯ ಈ ರಸ್ತೆಯಲ್ಲಿ ಬೈಕ್ ಸವಾರರು, ವೃದ್ದರು, ಮಕ್ಕಳು ಓಡಾಡಲು ಕಷ್ಟವಾಗ್ತಿದ್ದು, ಗುಂಡಿ ಮುಚ್ಚಲು ಮನವಿ ಮಾಡಿದ್ರೂ ನಗರಸಭೇ ಮಾತ್ರ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.