ನಲ್ಲಿಗಳಲ್ಲಿ ಪ್ರಯೋಗಿಕ ನೀರು ಬಿಟ್ಟಿರುವುದುತುಮಕೂರು
ಶಿರಾ:
ಕೇಂದ್ರ ಮತ್ತು ರಾಜ್ಯಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಲ್ಲೊಂದಾದ ಜಲಜೀವನ್ ಮಿಷನ್ ಯೋಜನೆ ಹಳ್ಳಿ ಭಾಗಗಳಲ್ಲಿ ಒಂದಲ್ಲ ಒಂದು ಸಮಸ್ಯೆಯಾಗಿ ಮಾರ್ಪಡುತ್ತಿದೆ, ಈ ಜ್ವಲಂತ ಸಮಸ್ಯೆಗಳನ್ನು ವಿಸ್ತೃತವಾಗಿ ಪ್ರಜಾಶಕ್ತಿ ವರದಿ ಬಿತ್ತರಿಸಿ ಅಧಿಕಾರಿಗಳ ಗಮನ ಸೆಳೆಯುವ ಕೆಲಸವನ್ನು ಮಾಡುತ್ತಿದೆ. ಇದರಂತೆ ಶಿರಾ ತಾಲೂಕಿನ ಗಡಿ ಗ್ರಾಮವಾದ ಚಂಗಾವರ ಗ್ರಾಮದಲ್ಲಿ ಮನೆ ಮನೆ ಗಂಗೆ ಇದ್ರು ಕೂಡ ನೀರು ಮಾತ್ರ ಬರ್ತಿಲ್ಲ , ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ ಎಂದು ಪ್ರಜಾಶಕಿ ವರದಿ ಮಾಡಿದ ಬೆನ್ನಲ್ಲೇ ಎಚ್ಚೆತ್ತ ಗುತ್ತಿಗೆದಾರನಿಂದ ಪ್ರಾಯೋಗಿಕ ನೀರು ಹರಿಸಲಾಗಿದೆ.
ಹೌದು ಎರಡು ದಿನಗಳ ಹಿಂದೆಯಷ್ಟೆ ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಚಂಗಾವರ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕೆ.ಕೆಪಾಳ್ಯ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಹಾಗೂ ಸ್ವಚ್ಚತೆ ಬಗ್ಗೆ ವಿಸ್ಕೃತ ಸುದ್ದಿ ಪ್ರಸಾರವಾಗಿತ್ತು. ಗ್ರಾಮದಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಮನೆ ಮನೆ ಗಂಗೆ ನಲ್ಲಿಯನ್ನು ಹಾಕಿದರೂ ಕೂಡ ನೀರು ಬರ್ತಿಲ್ಲ, ಗ್ರಾಮದಲ್ಲಿ 3 ಟ್ಯಾಂಕರ್ ಇದ್ದರೂ ನೀರು ಇಲ್ಲದೇ, ನೀರಿನ ಸಮಸ್ಯೆಯನ್ನು ಪರಿಹಾರ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದರೂ ಕೂಡ ಅಧಿಕಾರಿಗಳು ಮಾತ್ರ ಗಮನ ಹರಿಸುತ್ತಿರಲಿಲ್ಲ.
ಆದರೆ ಪ್ರಜಾಶಕ್ತಿ ವರದಿ ಬೆನ್ನಲ್ಲೇ ಗುತ್ತಿಗೆದಾರ ಪ್ರಯೋಗಿಕ ನೀರನ್ನು ಬಿಟ್ಟು ಇನ್ನೋಂದು ವಾರದೊಳಗೆ ಅಧಿಕಾರಿ ವರ್ಗದವರ ಸಹಾಯದಿಂದ ಮನೆ ಮನೆಗೆ ನೀರು ಹರಿಸುತ್ತೇವೆ ಎಂದಿದ್ದಾರೆ. ಇದಕ್ಕೆ ಗ್ರಾಮಸ್ಥರು ಪ್ರಜಾಶಕ್ತಿಟಿವಿಗೆ ಗ್ರಾಮಸ್ಥರಿಂದ ಅಭಿನಂದನೆಯ ಮಹಾಪೂರವೇ ಸಿಕ್ಕಿದೆ.
ಏನೇ ಆಗಲಿ ಹಳ್ಳಿ ಭಾಗಗಳಲ್ಲಿ ಮೂಲಭೂತವಾಗಿ ಸಮಸ್ಯೆಯಾಗಿ ಕಾಡ್ತಾಯಿರೋದು ಕುಡಿಯುವ ನೀರಿನ ವ್ಯವಸ್ಥೆ ಇದನ್ನ ಸರಿಪಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಳ್ಳದೆ ಸಮಸ್ಯೆಗಳಿಗೆ ಮುಕ್ತಿ ನೀಡುವ ಕೆಲಸ ಮಾಡಬೇಕು.