ಶಿರಾ : ಜಾತಿಗಣತಿಗೆ ಬಂದ ಗಣತಿದಾರರಿಗೆ ಜನರಿಂದ ಅದ್ದೂರಿ ಸ್ವಾಗತ

ಶಿರಾ :

ಪ್ರಸಕ್ತ ಸಾಲಿನ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತಾದ ಸಮೀಕ್ಷೆಗೆ ಸಂಬಂಧಿಸಿದಂತೆ ನ್ಯಾ.ಎಚ್.ಎನ್. ನಾಗಮೋಹನ್‌ ದಾಸ್ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ಜಾತಿಗಣತಿ ನಡೆಯುತ್ತಿದ್ದು. ಅದರಂತೆ ಶಿರಾ ತಾಲ್ಲೂಕಿನಲ್ಲಿಯೂ ಸಹ ಜಾತಿ ಗಣತಿ ಕಾರ್ಯ ಆರಂಭವಾಗಿದೆ.

ಒಳ ಮೀಸಲಾತಿ ಗೊಂದಲದ ಹಿನ್ನೆಲೆಯಲ್ಲಿ ಸಮಗ್ರ ದತ್ತಾಂಶ ಸಂಗ್ರಹ ಮಾಡುವ ನಿಟ್ಟಿನಲ್ಲಿ ಸಮೀಕ್ಷೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಶಿರಾ ನಗರದಲ್ಲಿ ಸಮೀಕ್ಷೆಗೆ ಚಾಲನೆ ನೀಡಲಾಗಿದ್ದು, ಜಾತಿಗಣತಿಗೆ ಬಂದ ಗಣಿತಿದಾರರನ್ನು ಶಿರಾ ನಗರದ ಮಲ್ಲಿಕಾಪುರದ ಬಡಾವಣೆಯ ನಾಗರೀಕರು ಶಾಲು, ಹಾರ ಹಾಕಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಶಿವಮ್ಮ, ಗ್ರಾಮಸ್ಥರು ಹಾಗೂ ಬಡಾವಣೆಯ ದಲಿತ ಮುಖಂಡರು ಸೇರಿದಂತೆ ಮತ್ತಿತರರು ಹಾಜರಿದ್ದರು.

Author:

...
Sushmitha N

Copy Editor

prajashakthi tv

share
No Reviews